ಪಾಕ್ ನುಸುಳುಕೋರನ ಸದೆಬಡಿದ ಒನಕೆ ಓಬವ್ವ

ಬಿಎಸ್ಎಫ್ ಗೆ ಸೇರಿದ ಆರತಿ ಮತ್ತು ರೀನಾ ಎಂಬಿಬ್ಬರು ಗಡಿ ಭಾಗದಲ್ಲಿ ದೇರಾ ಬಾಬಾ ನಾನಕ್ ಸಮೀಪ ಬಿಪಿ ನಂ. 42-17 ಬಳಿ ಚಲನವಲನಗಳು ಕಂಡುಬರುತ್ತಿದ್ದಂತೆ ಸ್ವತಃ ಜಾಗೃತರಾಗಿದ್ದಾರೆ. ತಕ್ಷಣ ಶರಣಾಗುವಂತೆ ಆಗಂತುಕನಿಗೆ ಸೂಚಿಸಿದ್ದಾರೆ.
ಆದರೆ ಆ ನುಸುಳುಕೋರ ಇವರ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿ, ಮುಂದೆ ಬರಲು ಯತ್ನಿಸಿದಾಗ ಆರತಿ ಮತ್ತು ರೀನಾ ಗುಂಡಿನ ಮಳೆಗೆರೆದಿದ್ದಾರೆ. ನುಸುಳುಕೋರ ಸಹ ಇವರತ್ತ ಗುಂಡುಹಾರಿಸಿದ್ದಾನೆ. ಆದರೆ ಅಂತಿಮವಾಗಿ ಬಿಎಸ್ಎಫ್ ಮಹಿಳಾ ಯೋಧರ ಗುಂಡಿಗೆ ಸ್ಥಳದಲ್ಲೇ ಪ್ರಾಣತೆತ್ತಿದ್ದಾನೆ.
ಹಾಗೆ ನೋಡಿದರೆ 2009ರಲ್ಲಿ ಬಿಎಸ್ಎಫ್ ನಲ್ಲಿ ಮಹಿಳಾ ಯೋಧರನ್ನು ನೇಮಿಸಿಕೊಳ್ಳುವ ಸಂಪ್ರದಾಯ ಆರಂಭವಾಯಿತು. ಆದರೆ ಇದುವರೆಗೂ ಯಾವುದೇ ಮಹಿಳೆ ಗುಂಡು ಹಾರಿಸಿರಲಿಲ್ಲ. ಇದೇ ಮೊದಲು. ಇದರಿಂದ ಇಡೀ ದೇಶಕ್ಕೆ ಇವರ ಬಗ್ಗೆ ಹೆಮ್ಮೆಯೆನಿಸಿದೆ. ಆರತಿ ಮತ್ತು ರೀನಾರನ್ನು ಸದ್ಯದಲ್ಲೇ ಸನ್ಮಾನ ಮಾಡಲಾಗುವುದು ಎಂದು ಬಿಎಸ್ಎಫ್ DIG ಪಿಎಸ್ ಬೇಯ್ನ್ಸ್ ತಿಳಿಸಿದ್ದಾರೆ.












Click it and Unblock the Notifications