ಕುಂದಾಪುರದಿಂದ ಮೈಸೂರಿಗೆ ಹೊಸ Non AC ಬಸ್

Kundapur to Mysore non AC bus
ಕುಂದಾಪುರ, ಏ.29: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗದ ಕುಂದಾಪುರ ಘಟಕದ ವತಿಯಿಂದ ಕುಂದಾಪುರ-ಮೈಸೂರು ನಡುವೆ ಸಾದಾ ಎಸಿ ರಹಿತ ಬಸ್ ವ್ಯವಸ್ಥೆ ಆರಂಭಿಸಲಾಗಿದೆ. ಸುಮಾರು 340ಕ್ಕೂ ಅಧಿಕ ಕಿ.ಮೀ ದೂರದ ಪ್ರಯಾಣಕ್ಕೆ ಎಸಿ ಬಸ್ ಬೇಕು ಎಂದು ಸಾರ್ವಜನಿಕರ ಬೇಡಿಕೆಗೆ ಇನ್ನೂ ಸಮರ್ಪಕ ಉತ್ತರ ಸಿಕ್ಕಿಲ್ಲ.

ಕುಂದಾಪುರ, ಕೋಟೇಶ್ವರ, ಬ್ರಹ್ಮಾವರ, ಉಡುಪಿ, ಪಡುಬಿದ್ರೆ, ಮುಲ್ಕಿ ಸಾಲಿಗ್ರಾಮ, ಮಂಗಳೂರು, ಪುತ್ತೂರು, ಸುಳ್ಯ, ಮಡಿಕೇರಿ, ಕುಶಾಲನಗರ, ಹುಣಸೂರು ಮಾರ್ಗವಾಗಿ ಮೈಸೂರು ತಲುಪಲಿದೆ.

ಮೈಸೂರಿನಿಂದ ಇದೇ ಮಾರ್ಗವಾಗಿ ಕುಂದಾಪುರಕ್ಕೆ ಬಸ್ ತಲುಪಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ಕುಂದಾಪುರ ಘಟಕದಿಂದ ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಿಸಿದ್ದಾರೆ.

ಕುಂದಾಪುರ ಬಸ್ ನಿಲ್ದಾಣದಿಂದ ರಾತ್ರಿ 9:30ಕ್ಕೆ ಹೊರಡುವ ಬಸ್, 10:30ಕ್ಕೆ ಉಡುಪಿ, 11:45ಕ್ಕೆ ಮಂಗಳೂರು ಮಾರ್ಗವಾಗಿ ಮೈಸೂರಿಗೆ ಬೆಳಗ್ಗೆ 6:15ಕ್ಕೆ ತಲುಪಲಿದೆ. ಮರು ಪ್ರಯಾಣದಲ್ಲಿ ಮೈಸೂರಿನಿಂದ 9:15ಕ್ಕೆ ಹೊರಟು ಮಂಗಳೂರಿಗೆ 3:45, ಉಡುಪಿಗೆ 5ಗಂಟೆ ಹಾಗೂ ಕುಂದಾಪುರಕ್ಕೆ ಬೆಳಗ್ಗೆ 5:45ಕ್ಕೆ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+