ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷೆಗೊಳಗಾದ ಗಿಲಾನಿಗೆ ಇನ್ನಾರು ತಿಂಗಳ ನಂತರ

By Srinath
|
Google Oneindia Kannada News

pak-pm-gilani-convicted-what-next
ಇಸ್ಲಾಮಾಬಾದ್,ಏ.27: ದೇಶದ ಚಾಣಾಕ್ಷ ನ್ಯಾಯವಾದಿಗಳೇ ಪ್ರಧಾನಿ ಯೂಸುಫ್ ರಜಾ ಗಿಲಾನಿ ರಕ್ಷಣೆಗೆ ಧಾವಿಸಿದರೂ ಅವರಿಗೆ ಶಿಕ್ಷೆಯಾಗುವುದನ್ನು ತಪ್ಪಿಸಲಾಗಿಲ್ಲ. ಮತ್ತು ಅದೇ ಈಗ ಅವರ ಸ್ಥಾನಕ್ಕೆ ಸಂಚಕಾರ ಬಂದಿದೆ.

ಪಾಕಿಸ್ತಾನದ ಸಂವಿಧಾನದಲ್ಲಿ 63(1ಜಿ) ವಿಧಿಯ ಅನುಸಾರ ಯಾವುದೇ ಸಂಸದ ಕೋರ್ಟ್ ಶಿಕ್ಷೆಗೆ ಗುರಿಯಾದರೆ ಆತನ ಸಂಸತ್ತಿನಿಂದ ಅನರ್ಹತೆಗೊಳ್ಳುತ್ತಾನೆ. ಹಾಗಾದರೆ...ನಿನ್ನೆಯಷ್ಟೇ ಶಿಕ್ಷೆಗೆ ಗುರಿಯಾದ ಪ್ರಧಾನಿ ಗಿಲಾನಿ ಗತಿಯೇನು?

ಅಷ್ಟು ಸುಲಭವಾಗಿ ನಾಳೆಯೇ ಅವರನ್ನು ಪ್ರಧಾನಿಪಟ್ಟದಿಂದ ತೆಗೆದುಹಾಕಲು ಸಾಧ್ಯವಿಲ್ಲವಾದರೂ ಅವರ ಖುರ್ಚಿ ಕೇವಲ 6 ತಿಂಗಳು ಉಳಿಯಬಲ್ಲದು. ಆನಂತರ ಅವರು ಕೆಳಗಿಳಿಯಲೇಬೇಕು. ನೈತಿಕ ಹೊಣೆಹೊತ್ತು ತಕ್ಷಣವೇ ಅವರು ಪ್ರಧಾನಿಪಟ್ಟದಿಂದ ಕೆಳಗಿಳಿಯುವುದು ಸೂಕ್ತವಾದರೂ ಮೇಲ್ಮನವಿ ಸಲ್ಲಿಸುವ ಇರಾದೆಯೊಂದಿಗೆ ಒಂದಷ್ಟು ಕಾಲ ಕಾಲತಳ್ಳಬಹುದು. ಆದರೂ ಯಾವಾಗ ಏನಾಗುತ್ತದೋ...

ಆದರೆ ಗಿಲಾನಿ ಪ್ರತಿನಿಧಿಸುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅದಾಗಲೇ ಮೊಂಡಾಟಕ್ಕೆ ಇಳಿದಿದೆ. ಯಾವುದೇ ಕಾರಣಕ್ಕೂ ಪ್ರಧಾನಿ ಗಿಲಾನಿ ಅವರನ್ನು ಸ್ಥಾನ ತ್ಯಜಿಸುವಂತೆ ಕೆಳುವುದಿಲ್ಲ ಎಂದು ಘೋಷಿಸಿದೆ.

ಮೇಲ್ಮನವಿ ಸಲ್ಲಿಸಿದ ಬಳಿಕವೂ ತೀರ್ಪು ಪ್ರಧಾನಿ ಗಿಲಾನಿ ವಿರುದ್ದ ಬಂದರೆ 6 ತಿಂಗಳು ಮತ್ತು ಅದಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ಇದಾಗಿರುವುದರಿಂದ (10 ನಿಮಿಷಗಳ ಸಾಂಕೇತಿಕ ಶಿಕ್ಷೆ) ಸಂವಿಧಾನದಲ್ಲಿ 63(1ಎಚ್) ವಿಧಿಯ ಅನುಸಾರ ಸಂಸತ್ ಸದಸ್ಯರನ್ನು ಅನರ್ಹಗೊಳಿಸಲು ಬರುವುದಿಲ್ಲ ಎಂದು ಪಿಪಿಪಿ ಪೀಪಿ ಊದುತ್ತಿದೆ.

English summary
Even if all legal resources to save Pakistan Prime Minister Yousaf Raza Gilani are exhausted, it will still take over 6 months to remove him from the office, legal experts said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X