ಪಾಕ್ ಪ್ರಧಾನಿ ಗಿಲಾನಿಗೆ ಕೊನೆಗೂ ಶಿಕ್ಷೆಯಾಯಿತು

pakistan-pm-yousaf-raza-gilani-convicted
ಇಸ್ಲಾಮಾಬಾದ್,ಏ.27: ಕಾರ್ಯಾಂಗ ಮತ್ತು ನ್ಯಾಯಾಂಗದ ತಿಕ್ಕಾಟದಲ್ಲಿ ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿಗೆ ಕೊನೆಗೂ ಶಿಕ್ಷೆಯಾಗಿದೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಧಾನಿ ಗಿಲಾನಿ ತಪ್ಪಿತಸ್ಥರು ಎಂದು ಪಾಕ್ ಸುಪ್ರೀಂಕೋರ್ಟ್ ತೀರ್ಪು ನೀಡಿ, ಅವರಿಗೆ 10 ನಿಮಷಗಳ ಕಾಲ ಕಟಕಟೆಯಲ್ಲಿ ನಿಲ್ಲುವ ಸಾಂಕೇತಿಕ ಶಿಕ್ಷೆಯನ್ನು ಗುರುವಾರ ವಿಧಿಸಿತು.

ಆದರೆ ಶಿಕ್ಷೆ ಸಾಂಕೇತಿಕವಾಗಿದ್ದರೂ ದೂರಗಾಮಿಯಲ್ಲಿ ಅದು ವ್ಯತಿರಿಕ್ಯ ಪರಿಣಾಮ ಬೀರುವ ಆತಂಕದಿಂದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಗಿಲಾನಿ ಪರ ನ್ಯಾಯವಾದಿ ಹೇಳಿದ್ದಾರೆ.

ಗಿಲಾನಿಯಿಂದ ನ್ಯಾಯಾಂಗಕ್ಕೆ ಆದ ಅಪಚಾರವಾದರೂ ಏನಪಾ ಅಂದರೆ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿತ್ತು. ಅದನ್ನು ಮತ್ತೆ ತನಿಖೆಗೊಳಪಡಿಸಿ ಎಂದು ಕೋರ್ಟ್ ಹೇಳಿತ್ತು. ಆದರೆ ಗಿಲಾನಿ ಮರುತನಿಖೆಗೆ ಆದೇಶಿಸಲೇ ಇಲ್ಲ. ಆದ್ದರಿಂದ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮಾಡಿದ ಆರೋಪ ಹೊರಿಸಲಾಗಿತ್ತು.

ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 56 ವರ್ಷದ ಗಿಲಾನಿ ಆರು ತಿಂಗಳ ಸೆರೆವಾಸ ಅನುಭವಿಸಬೇಕಿತ್ತು. ಆದರೆ ಕೋರ್ಟ್ ಸಾಮಕೇತಿಕ ಶಿಕ್ಷೆ ನೀಡಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಸಿರುಲ್ ಮುಲ್ಕ್ ನೇತೃತ್ವದ ಏಳು ಸದಸ್ಯರ ನ್ಯಾಯಪೀಠವು, ಗಿಲಾನಿಗೆ ಜೈಲುಶಿಕ್ಷೆಯ ಬದಲಿಗೆ ಕೋರ್ಟ್ ಕಲಾಪ ಮುಗಿಯುವ ತನಕ (10 ನಿಮಿಷ) ಕಟಕಟೆಯಲ್ಲಿ ನಿಲ್ಲುವ ಶಿಕ್ಷೆಯನ್ನು ಜಾರಿಗೊಳಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+