ಭವಿಷ್ಯ ನಿಧಿ ಬಡ್ಡಿದರ ತುಸು ಏರಿಕೆ

ಅಂದರೆ ಈ ಏರಿಕೆಯ ಪ್ರಮಾಣ ಶೇ. 0.35 ರಷ್ಟಿದೆ. ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಗುರುವಾರ ಈ ವಿಷಯ ಪ್ರಕಟಿಸಿದ್ದಾರೆ. 2010-11ನೇ ಆರ್ಥಿಕ ವರ್ಷದಲ್ಲಿ ಭವಿಷ್ಯ ನಿಧಿ ಬಡ್ಡಿದರ ಶೇ. 9.5 ರಷ್ಟಿತ್ತು.
ಭವಿಷ್ಯ ನಿಧಿ ಖಾತೆಗೆ ಐದು ಕೋಟಿಗೂ ಹೆಚ್ಚು ನೌಕರರು ಸದಸ್ಯರಾಗಿದ್ದಾರೆ. ಸದಸ್ಯರಿಂದ ಸ್ವೀಕರಿಸುವ ನಿಧಿಯನ್ನು ವಿಶೇಷ ಠೇವಣಿ ಯೋಜನೆಗಳಲ್ಲಿನ ಹೂಡಿಕೆ ಮಾಡಲಾಗುವುದು. ಅದರಿಂದ ಬರುವ ಆದಾಯಕ್ಕೆ ತಕ್ಕಂತೆ ಬಡ್ಡಿದರ ವಿತರಿಸುತ್ತೇವೆ.
ಕಳೆದ ವರ್ಷ (2011-12) ಈ ಹೂಡಿಕೆಗಳಲ್ಲಿ ಕಡಿಮೆ ಆದಾಯ ಬಂದಿದ್ದರಿಂದ ಬಡ್ಡಿ ದರಗಳನ್ನು ಇಳಿಸಲಾಗಿತ್ತು. ಆದರೆ ಈ ಸಲ ಬಡ್ಡಿ ದರ ಏರಿಕೆಯಾಗುವ ವಿಶ್ವಾಸವಿದೆ ಎಂದು ಖರ್ಗೆ ತಿಳಿಸಿದರು.












Click it and Unblock the Notifications