ನಾನು ಗೂಂಡಾ ಸಂಸ್ಕೃತಿ ವಿರೋಧಿ: ಯಡ್ಡಿ

BS Yeddyurappa
ಮೈಸೂರು, ಏ.26: 'ತಮಗೆ ದೂರವಾಣಿ ಕರೆ ಮೂಲಕ ಬೆದರಿಕೆ ಹಾಕಿದ್ಯಾರು ಅಂತ ಬಹಿರಂಗಪಡಿಸಿ. ನಾನಂತೂ ಬೆದರಿಕೆ ಹಾಕಿಸಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಗೂಂಡಾ ಸಂಸ್ಕೃತಿ ಪ್ರೋತ್ಸಾಹಿಸುವುದಿಲ್ಲ ಹಾಗೂ ಸಹಿಸುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಸ್ ಆರ್ ಹಿರೇಮಠ್ ಅವರ ಆರೋಪಕ್ಕೆ ತಕ್ಕ ಉತ್ತರ ನೀಡಿದ್ದಾರೆ.

'ನಿಮಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದು ಯಾರು ಅಂತ ದಯಮಾಡಿ ಬಹಿರಂಗಪಡಿಸಿ' ಎಂದು ಯಡಿಯೂರಪ್ಪ ಮತ್ತೆ ಮತ್ತೆ ಮನವಿ ಮಾಡಿಕೊಂಡರು.

ಬೆದರಿಕೆ ಒಡ್ಡಿದವರ ವಿವರಗಳನ್ನು ನೀಡಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳೋಣ ನಾನು ನಿಮ್ಮ ಜತೆ ಕೈಜೋಡಿಸುತ್ತೇನೆ. ಅಷ್ಟೇ ಅಲ್ಲ, ಹಿರೇಮಠ್ ಅವರ ಜತೆ ಮಾತುಕತೆಗೂ ಸಿದ್ಧ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹೂಡಿರುವ ಕೇಸ್ ವಾಪಸ್ ಪಡೆದುಕೊಳ್ಳುವಂತೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಹಿರೇಮಠ್ ಅವರಿಗೆ ಗಣ್ಯ ವ್ಯಕ್ತಿಗಳಿಬ್ಬರು ಜೀವ ಬೆದರಿಕೆ ಒಡ್ಡಿರುವುದಾಗಿ ಮಂಗಳವಾರ(ಏ.24) ಆರೋಪಿಸಿದ್ದರು.

ಯಡಿಯೂರಪ್ಪ ವಿರುದ್ಧದ ಕೇಸ್ ವಾಪಸ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಅವರ ಜತೆ ಸಂಧಾನಕ್ಕೆ ಬರುವಂತೆ ನನಗೆ ದೂರವಾಣಿ ಮೂಲಕ ತಿಳಿಸಿದ್ದರು. ಆದರೆ
ನಾನು ಭೇಟಿಗೆ ನಿರಾಕರಿಸಿದೆ ಎಂದು ಕಳೆದ ಮಾರ್ಚ್ ತಿಂಗಳಿನಲ್ಲೂ ಹಿರೇಮಠ್ ಹೇಳಿದ್ದರು.

ಆದರೆ, ಈ ಬಗ್ಗೆ ಯಾವುದೇ ಪೊಲೀಸ್ ದೂರು ನೀಡಿರಲಿಲ್ಲ. ಅದರ ಅಗತ್ಯವಿಲ್ಲ ಎಂದು ಹಿರೇಮಠ್ ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+