10 ಬಿಲಿಯನ್ ಡಾಲರ್ ದಾಟಿದ ಟಿಸಿಎಸ್ ಆದಾಯ

TCS Q4 results
ಮುಂಬೈ, ಏ.24: 10 ಬಿಲಿಯನ್ ಡಾಲರ್ ಆದಾಯ ಗಳಿಸಿದ ಪ್ರಪ್ರಥಮ ಭಾರತೀಯ ಸಾಫ್ಟ್ ವೇರ್ ಕಂಪನಿ ಎಂಬ ಹೆಗ್ಗಳಿಕೆಗೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಪಾತ್ರವಾಗಿದೆ. 2011-12ನೇ ಸಾಲಿನ Q4 ವರದಿ ಪ್ರಕಟಿಸಿಅ ಟಿಸಿಎಸ್ ಶೇ 30.5ರಷ್ಟು ಆದಾಯ ಹೆಚ್ಚಳ ಕಂಡಿದೆ.

ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿ ಆದಾಯ 13,259 ಕೋಟಿ ರು (year-on-year) ಹಾಗೂ ಕಳೆದ ವರ್ಷ ಇದೇ ಅವಧಿಯ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 1.4 ರಷ್ಟು ಪ್ರಗತಿ ಕಂಡಿದೆ.

Q4 ಲಾಭಾಂಶ ಶೇ 10.4ರಷ್ಟು ಹೆಚ್ಚಾಗಿದ್ದು 2,895 ಕೋಟಿ ರು ಲಾಭ ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 3.3ರಷ್ಟು ಪ್ರಗತಿ ಸಾಧಿಸಲಾಗಿದೆ.

ರು.8 ಪ್ರತಿ ಷೇರಿನಂತೆ ಅಂತಿಮ ಲಾಭಾಂಶವನ್ನು ಘೋಷಿಸಲಾಗಿದೆ. ಗ್ರಾಹಕ ಕೇಂದ್ರಿತ ವಿಧಾನದಿಂದ ಟಿಸಿಎಸ್ ಹೆಚ್ಚಿನ ಲಾಭ ಗಳಿಸಿದೆ. ಮೊಬಿಲಿಟಿ, ಬೃಹತ್ ದತ್ತಾಂಶ, ಕ್ಲೌಡ್ ತಂತ್ರಜ್ಞಾನವನ್ನು ಇನ್ನಷ್ಟು ದುಡಿಸಿಕೊಳ್ಳಬೇಕಿದೆ ಎಂದು ಸಿಎಫ್ಒ ರಾಮಲಿಂಗಂ ಹೇಳಿದ್ದಾರೆ.

2011-12 ಸಾಲಿನಲ್ಲಿ ಸುಮಾರು 70,400 ವೃತ್ತಿಪರರನ್ನು ನೇಮಕಾತಿ ಮಾಡಿಕೊಂಡು ಹೊಸ ದಾಖಲೆ ಬರೆಯಲಾಗಿದೆ. ಕ್ಯಾಂಪಸ್ ಸಂದರ್ಶನ ಮೂಲಕ ಆಯ್ಕೆಯಾದ 43,600 ಅಭ್ಯರ್ಥಿಗಳು ಮುಂದಿನ ತ್ರೈಮಾಸಿಕದ ಕೊನೆಗೆ ಸಂಸ್ಥೆಯನ್ನು ಸೇರಲಿದ್ದಾರೆ ನೇಮಕಾತಿ ವಿವರಗಳಿಗೆ ಕ್ಲಿಕ್ ಮಾಡಿ.

ಟಾಟಾ ಸಮೂಹದ ಟಿಸಿಎಸ್, ಭಾರತದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆಯಾಗಿದೆ. ಸುಮಾರು 42 ದೇಶಗಳಲ್ಲಿ 238,583ಕ್ಕೂ ಅಧಿಕ ತರಬೇತಿ ಪಡೆದ ಕನ್ಸಲ್ಟೆಂಟ್ ಗಳನ್ನು ಟಿಸಿಎಸ್ ಹೊಂದಿದೆ. ಈಗ 10 ಬಿಲಿಯನ್ ಡಾಲರ್ ದಾಟಿದ ಮೊದಲ ಕಂಪನಿ ಎಂಬ ಹಿರಿಮೆಗೆ ಪಾತ್ರವಾಗಿದೆ. (ಗುಡ್ ರಿಟರ್ನ್ಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+