ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಿಮೋಳಿಗೆ ಜಾರಿ ನಿರ್ದೆಶನಾಲಯ ಬುಲಾವ್

By Srinath
|
Google Oneindia Kannada News

2g-scam-ed-to-grill-kanimozhi-may-end
ನವದೆಹಲಿ, ಏ.23: 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಸಂಸದೆ ಕನ್ನಿಮೋಳಿಗೆ ಮತ್ತಷ್ಟು ಸಂಕಷ್ಟವೊದಗಿದೆ. ಪ್ರಸಕ್ತ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಮೇ ಅಂತ್ಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) 43 ವರ್ಷದ ಕನ್ನಿಮೋಳಿಗೆ ಸಮನ್ಸ್ ಜಾರಿ ಮಾಡಿದೆ.

ಖುದ್ದು ಹಾಜರಾಗಬೇಕು ಅಥವಾ ಅಧಿಕೃತ ಪ್ರತಿನಿಧಿಯೊಬ್ಬರಿಂದ ಹಣಕಾಸು ದಾಖಲಾತಿಗಳು ಮತ್ತು ಹೇಳಿಕೆಯ ಧ್ವನಿಮುದ್ರಣವನ್ನು ತಲುಪಿಸಬೇಕು ಎಂದು ಸೂಚಿಸಿರುವುದಾಗಿ ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ಡಿಎಂಕೆ ಕುಟುಂಬದ ಒಡೆತನದ ಕಲೈಂಞರ್ ಟಿವಿ ಚಾನೆಲ್‌ಲ್ಲಿ ಕನ್ನಿಮೋಳಿ ಶೇ. 20ರಷ್ಟು ಪಾಲು ಹೊಂದಿದ್ದು, ಈ ಚಾನೆಲ್‌ಗೆ 200 ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿರುವ ಬಗ್ಗೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಲಿದೆ. ಆರೋಪ ಸಾಬೀತಾದರೆ ಕನ್ನಿಮೋಳಿಗೆ 7 ವರ್ಷಗಳ ತುರಂಗವಾಸ ಕಟ್ಟಿಟ್ಟಬುತ್ತಿ.

2ಜಿ ಹಗರಣ ಸಂಬಂಧ ಬಂಧಿಯಾಗಿದ್ದ ಕನ್ನಿಮೋಳಿಯನ್ನು ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಮತ್ತು ಮುಂದಿನ ವಿಚಾರಣೆಯನ್ನು ಇ.ಡಿ.ಗೆ ವಹಿಸಲಾಗಿತ್ತು. 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಹಲವೆಡೆ ಹಣಕಾಸು ವ್ಯವಹಾರಗಳ ಬಗ್ಗೆಯೂ ಇ.ಡಿ. ಪರಿಶೀಲಿಸುತ್ತಿದ್ದು, ಈ ಮುಂಚೆ ಕನ್ನಿಮೋಳಿ ಅವರ ಆದಾಯ, ಆಸ್ತಿ ಮತ್ತು ವೈಯಕ್ತಿಕ ಹೂಡಿಕೆ ಬಗ್ಗೆ ಕಳೆದ ವರ್ಷ ಮೇ 16ರಂದು ತನಿಖೆ ನಡೆದಿತ್ತು.

English summary
Armed with an appellate tribunal's order for attachment of properties of Kalaignar TV, under the PMLA, the Enforcement Directorate is likely to seek the prosecution of DMK MP Kanimozhi for alleged offences punishable with jail term up to seven years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X