ಜಗನ್ ಏಕೆ ಬಂಧಿಸಿಲ್ಲ? ಕೋರ್ಟ್ ಪ್ರಶ್ನೆಗೆ ಸಿಬಿಐ ತತ್ತರ

CBI Chargesheet YS Jagan
ಹೈದರಾಬಾದ್, ಏ.17: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಕೈಲಿ ಹಿಡಿದ ಹೈಕೋರ್ಟ್ ನ್ಯಾಯಮೂರ್ತಿಗಳು ಆರೋಪಿ ನಂ.1 ಏಕೆ ಬಂಧಿಸಿಲ್ಲ ಎಂದು ಸಿಬಿಐ ಅಧಿಕಾರಿಗಳನ್ನು ಪ್ರಶ್ನಿಸಿ ತತ್ತರಿಸುವಂತೆ ಮಾಡಿದ್ದಾರೆ.

ವೈಎಸ್ ಜಗನ್ ಮೋಹನ್ ರೆಡ್ಡಿ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಲು ನಿರ್ಧರಿಸಿದ ಸಿಬಿಐ ಚಾರ್ಜ್ ಶೀಟ್ ಕೋರ್ಟಿಗೆ ಸಲ್ಲಿಸಿ ಜಗನ್ ರೆಡ್ಡಿಯನ್ನು ಆರೋಪಿ ನಂ.1 ಎಂದು ಹೆಸರಿಸಿತ್ತು

ಸಿಬಿಐ ಪೇಚಿಗೆ ಸಿಲುಕಿದ್ದು ಹೇಗೆ?: ಈ ಪ್ರಕರಣದ ಪ್ರಮುಖ ಆರೋಪಿಯಾಗಿ ಬಂಧನಕ್ಕೂ ಒಳಗಾಗಿದ್ದ ಆಡಿಟರ್ ವಿಜಯ ಸಾಯಿ ರೆಡ್ಡಿ ಅವರಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ಕೋರ್ಟ್ ಮೊರೆ ಹೊಕ್ಕಿತ್ತು.

ವಿಜಯ ಸಾಯಿ ರೆಡ್ಡಿಗೆ ಜಾಮೀನು ಕೊಟ್ಟಿದ್ದು ಏಕೆ? ಎಂದು ಸಿಬಿಐ ಪ್ರಶ್ನಿಸಿದ್ದ ಮನವಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್, ತಕ್ಷಣವೇ ಸಿಬಿಐ ತಂಡವನ್ನು ಪ್ರಶ್ನಿಸಿದೆ.

ನೀವು ವಿಜಯ ಸಾಯಿರೆಡ್ಡಿಯನ್ನು ಮಾತ್ರ ಏಕೆ ಟಾರ್ಗೆಟ್ ಮಾಡ್ತಾ ಇದ್ದೀರಾ? ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 17 ಜನ ಆರೋಪಿಗಳನ್ನು ಏಕೆ ಬಂಧಿಸಿಲ್ಲ? ಪ್ರಮುಖ ಆರೋಪಿ ಜಗನ್ ಮೋಹನ್ ರೆಡ್ಡಿ ಬಂಧಿಸದೇ ಚಾರ್ಜ್ ಶೀಟ್ ಸಲ್ಲಿಸಿದ್ದು ಏಕೆ? ಎಂದು ಪ್ರಶ್ನಿಸಲಾಗಿದೆ.

ವಿಜಯ ಸಾಯಿ ರೆಡ್ಡಿ ಸಾಕ್ಷಿ ನಾಶ, ಬೆದರಿಕೆ ಒಡ್ಡುವಷ್ಟು ಪ್ರಭಾವಿ ವ್ಯಕ್ತಿ ಎನ್ನುವುದಾದರೆ, ಜಗನ್ ರನ್ನು ಏಕೆ ಬಂಧಿಸಿಲ್ಲ ಎಂದು ಕೋರ್ಟ್ ಕೇಳಿದ ಪ್ರಶ್ನೆಗೆ ಸಿಬಿಐ ಉತ್ತರ ಸಿಗದೆ ತತ್ತರಿಸಿದೆ.

ಏ.18ಕ್ಕೆ ಮತ್ತೆ ಸಾಯಿ ರೆಡ್ಡಿ ಜಾಮೀನು ಅರ್ಜಿ ಪ್ರಶ್ನಿಸಿರುವ ವಿಚಾರಣೆ ನಡೆಯಲಿದೆ. ಜಗನ್ ಬಂಧಿಸುವಂತೆ ಕೊರ್ಟ್ ಮತ್ತೊಮ್ಮೆ ನಿರ್ದೇಶನ ನೀಡಿದರೆ, ಸಿಬಿಐ ತಂಡ ಅನಿವಾರ್ಯವಾಗಿ ಜೇನುಗೂಡಿಗೆ ಕೈ ಹಾಕಲೇ ಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+