ಚಿನ್ನ, ಬೆಳ್ಳಿ ಬೆಲೆ ಮತ್ತೆ ಕುಸಿತ, ಗ್ರಾಹಕರಿಗೆ ಖುಷಿ

ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ 10 ಗ್ರಾಂಗೆ ರೂ. 200ರಷ್ಟು ಕಡಿಮೆಯಾಗಿ ರೂ. 28,890ರು ಆಗಿದೆ. ಬೆಳ್ಳಿಯ ಬೆಲೆ ಕಿ.ಗ್ರಾಂ.ಗೆ ರೂ. 900ರಷ್ಟು ಇಳಿತಾಯವಾಗಿ ರೂ. 56 ಸಾವಿರದಷ್ಟಾಗಿತ್ತು.
99.9 ಹಾಗೂ 99.5 ಪರಿಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ ಕ್ರಮವಾಗಿ 28,890 ಹಾಗೂ 28,750ಕ್ಕೆ ಇಳಿಯಿತು. ಕಳೆದ ವಾರ ಸುಮಾರು 29 ಸಾವಿರಕ್ಕೆ ತಲುಪಿತ್ತು.
ಆದರೂ, 8 ಗ್ರಾಂನ ಚಿನ್ನದ ನಾಣ್ಯದ ಬೆಲೆ ರೂ. 23,550ರಲ್ಲಿ ಸ್ಥಿರವಾಗಿದೆ. ಬೆಳ್ಳಿ ನಾಣ್ಯಗಳು ಕೊಳ್ಳುವ ದರ 63,000 ರು ಹಾಗೂ ಮಾರಾಟ ದರ 64,000 ರು ಇದೆ. ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ 29,000.00 ಹಾಗೂ 22K ಚಿನ್ನದ ಬೆಲೆ 26,700.00 ಇದೆ. ಬೆಳ್ಳಿ ಬೆಲೆ 57,300 ರು ನಷ್ಟಿದೆ.












Click it and Unblock the Notifications