ಯುವ ನೇತಾರನಿಗೆ ಜೈ ಎಂದ ಸಂತೋಷ್ ಹೆಗ್ಡೆ

"ಕರ್ನಾಟಕದ ಜನತೆಗೆ ಒಳ್ಳೆಯ ಜನ ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ. ದುಷ್ಟ ಶಕ್ತಿಗಳು ಹಣ ಮತ್ತು ಹೆಂಡದಿಂದ ಮತಗಳನ್ನು ಖರಿದೀಸುತ್ತಿರಬಹುದು, ಆದರೆ ಎಲ್ಲ ಸಜ್ಜನರು ಒಗ್ಗಟ್ಟಾಗಿ ಒಂದೇ ಧ್ವನಿಯಲ್ಲಿ ಮುಂದೆ ಬಂದರೆ ಗೆಲುವು ನಮ್ಮದೇ" ಎಂಬ ಸಂದೇಶವನ್ನು ಕರ್ನಾಟಕದ ಮಾಜಿ ಲೋಕಾಯುಕ್ತ ರವಾನಿಸಿದರು.
ನೆರೆದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ನ್ಯಾಯಮೂರ್ತಿ ಸಂತೋಷ್ ಹೆಗಡೆ, "ಈ ಚನಾವಣೆಗೆ ಎಲ್ಲ ಪದವೀಧರರು ನೊಂದಯಿಸಿಕೊಂಡು ಮತ ಚಲಾಯಿಸುವುದಲ್ಲದೇ, ಪ್ರಮುಖವಾಗಿ ಎಲ್ಲ ರೀತಿಯಿಂದಲೂ ಅರ್ಹ ಅಭ್ಯರ್ಥಿಯಾದ ಡಾ. ಅಶ್ವಿನ್ ಮಹೇಶ್ ಅವರಿಗೆ ಮತ ಚಲಾಯಿಸಬೇಕೆಂದು ಕೇಳಿಕೊಳ್ಳುವೆ. ಅಶ್ವಿನ್ ಅವರನ್ನು ನಾನು ಕೆಲವು ವರ್ಷಗಳಿಂದ ಬಲ್ಲೆ, ಅವರ ದೂರದೃಷ್ಟಿತ್ವ, ಸಾಮಾಜಿಕ ಕಳಕಳಿ, ಪ್ರಾಮಾಣಿಕತೆ ಮತ್ತು ಸೇವೆಯನ್ನು ನಾನು ಬೆಂಬಲಿಸುತ್ತೇನೆ" ಎಂದರು.
ಕಳೆದ ಎರಡು ದಶಕಗಳಿಂದಲೂ ಒಂದು ರಹಸ್ಯ ಚುನಾವಣೆಯಾಗಿ ಮಾರ್ಪಟ್ಟಿದ್ದು, ಪದವೀಧರರ ಕ್ಷೇತ್ರದ ಚುನಾವಣೆಗಳು ಈಗ ಜನಸಾಮಾನ್ಯರಲ್ಲಿ ಇದರ ಬಗ್ಗೆ ಅರಿವು ಮೂಡುತ್ತಿದೆ. 20 ಲಕ್ಷ ಅರ್ಹ ಪದವೀಧರರಲ್ಲಿ ಕೇವಲ 90,000 ಜನ, ಅಂದರೆ ಶೇ.5ಕ್ಕಿಂತಲೂ ಕಡಿಮೆ ಮತದಾರರಿದ್ದಾರೆ. ಇತ್ತೀಚೆಗೆ ಕರ್ನಾಟಕದ ಮುಖ್ಯ ನ್ಯಾಯಾಲಯವು ಈ ಕುರಿತು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ ಎಂದು ಲೋಕಸತ್ತಾ ಪಕ್ಷದ ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಡಾ. ಮೀನಾಕ್ಷಿ ಭರತ್ ಅವರು ಹೇಳಿದರು.
ಡಾ. ಅಶ್ವಿನ್ ಮಹೇಶ್ : ಖಗೋಳ ಹಾಗೂ ವಾಯುಮಂಡಲ ವಿಜ್ಞಾನಿಯಾಗಿ ತರಬೇತಿ ಪಡೆದಿರುವ ಡಾ. ಮಹೇಶ್ ಅಮೆರಿಕದ ಪ್ರತಿಷ್ಠಿತ ನಾಸಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಮಹೇಶ್ ತಮ್ಮ ವೃತ್ತಿ ಜೀವನವನ್ನು ನಕ್ಷತ್ರಗಳ ರಚನೆ, ಜಾಗತಿಕ ಹವಾಮಾನ ಬದಲಾವಣೆ, ನಗರೀಕರಣ ಹಾಗೂ ಸಾರ್ವಜನಿಕ ಸಾರಿಗೆ ಮುಂತಾದ ವಿಷಯಳ ಕುರಿತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು.
ಸದ್ಯ ಅವರು ಸಂಶೋಧನಕಾರರಾಗಿ Centre of Excellence in Urban Governance, IIMB, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ನಗರ ಸಾರಿಗೆ ಮತ್ತು ಚಲನಶೀಲತೆ ಕುರಿತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ನಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಅವರು IIITಯಲ್ಲಿ ಬೋಧನಾ ಸಿಬ್ಬಂದಿಯಾಗಿ ಹಾಗೂ ಮ್ಯಾಪಯೂನಿಟಿ ಎಂಬ ಸಾಮಾಜಿಕ ತಂತ್ರಜ್ಞಾನ ಕಂಪನಿಯ ಮುಖ್ಯಸ್ಥರಾಗಿಯೂ ಕೆಲಸ ಮಾಡುತ್ತಿದ್ದಾರೆ.












Click it and Unblock the Notifications