ಈ ಲೋಕಲ್ ಸರ್ಚ್ ಇಂಜಿನ್ ಹೆಸರು ಹುಡುಕು

Hudku search engine
ಬೆಂಗಳೂರು, ಏ.12: ಬೆಂಗಳೂರು ಮೂಲದ ಸರ್ಚ್ ಇಂಜಿನ್ ಕಂಪನಿ ಹುಡ್ಕು.ಕಾಂ ತನ್ನ ಸ್ಥಳೀಯ ಸರ್ಚ್ ಇಂಜಿನ್ www.hudku.com ತಾಣವನ್ನು ಲೋಕಾರ್ಪೆ ಮಾಡಿದೆ.

ಜನ ಸಾಮಾನ್ಯರಿಂದ ಹಿಡಿದು ಉದ್ಯಮಿಗಳು, ವರ್ಗೀಕೃತ ಜಾಹೀರಾತು ನೋಡುವ ಗ್ರಾಹಕರು, ಗೃಹಿಣಿಯರಿಗೂ ಈ ಸರ್ಚ್ ಇಂಜಿನ್ ಅನುಕೂಲಕರವಾಗಿದೆ ಎಂದು ಕಂಪನಿ ಸಿಇಒ ಅರುಣ್ ಕುಮಾರ್ ಹೇಳುತ್ತಾರೆ.

ಒಂದೇ ವಿಂಡೋ ಇಂಟರ್ ಫೇಸ್ ಹೊಂದಿರುವ ಸರ್ಚ್ ಇಂಜಿನ್ ಬಾಕ್ಸ್ ನಲ್ಲಿ ಸುಲಭವಾಗಿ ಉತ್ತರ ಪಡೆಯಬಹುದು. ಉದಾ: wine barons in bangalore ಅಥವಾ ಇತರೆ ನಗರಗಳ ಹೆಸರು ಸೂಚಿಸಿದರೆ ಸಾಕು. ಮಳಿಗೆಯ ಪಟ್ಟಿ, ಲೋಕೇಷನ್ ಇನ್ನಿತರ ಮಾಹಿತಿಗಳು ಲಭ್ಯವಾಗಲಿದೆ.

LBS (Location Based Search):
ಒಂದು ನಿರ್ದಿಷ್ಟ ಬಡಾವಣೆ, ಪ್ರದೇಶ ಆಧಾರಿತ ಸರ್ವ್ ಕೂಡಾ ಇದರಲ್ಲಿ ಲಭ್ಯವಿದೆ.

ನಿಮ್ಮದೆ ಕೀ ವರ್ಡ್ ಕೊಡಿ: ನಿಮ್ಮ ಸರ್ಚ್ ಕೀ ಪದ/ಟ್ಯಾಗ್ ಗಳನ್ನು ಸೂಚಿಸಿ ಪಟ್ಟಿ ಮಾಡಿ ಪ್ರದರ್ಶಿಸಬಹುದಾಗಿದೆ.

ಈ ರೀತಿ ಒಂದು ಉದ್ಯಮಕ್ಕೆ ಸಂಬಂಧಿಸಿದಂತೆ ಚಿತ್ರಗಳು, ವಿಡಿಯೋ, ಆಡಿಯೋ, ಇನ್ನಿತರ ದಾಖಲೆಗಳು ಏಕಕಾಲಕ್ಕೆ ಲಭ್ಯವಾಗುವಂತೆ ಮಾಡಬಹುದು.

ಯೆಲ್ಲೋ ಪೇಜಸ್, ವರ್ಗಿಕೃತ ಜಾಹೀರಾತು, ಆಟೋಮೊಬೈಲ್ ಖರೀದಿ/ಮಾರಾಟ ಈ ರೀತಿ ಉತ್ಪನ್ನ ಆಧಾರಿತ ಸರ್ಚ್ ಕೂಡಾ ಲಭ್ಯವಿದೆ.

ಉದಾ: maruti automobiles bangalore ಬಲಬದಿ ಹಾಕಿ ಎಡಬದಿ ಲಿಸ್ಟಿಂಗ್ ನಲ್ಲಿ ಆಟೋ ಮೊಬೈಲ್ ಕ್ಲಾಸಫೈಡ್ಸ್ ಆಯ್ಕೆ ಮಾಡಿಕೊಂಡರೆ ಬಳಸಿ ಮಾರುತಿ ಕಾರು ಮಾರಾಟಕ್ಕೆ ಇರುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.

ಇದೇ ರೀತಿ ರಿಯಲ್ ಎಸ್ಟೇಟ್ ಜಾಹೀರಾತುಗಳನ್ನು ಹುಡುಕಬಹುದು. banashanakri bangalore ಎಂದು ಟೈಪಿಸಿದರೆ ಆ ಪ್ರದೇಶದಲ್ಲಿ ಬಾಡಿಗೆ, ಬೋಗ್ಯ, ಮಾರಾಟಕ್ಕೆ ಲಭ್ಯವಿರುವ ಮನೆ, ಫ್ಲ್ಯಾಟ್ ಗಳ ವಿವರ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+