ಹೆಣ್ಣಾಗಿ ಹುಟ್ಟಿದಕ್ಕೆ ಅಪ್ಪನಿಂದ ಈ ಪರಿಯ ಶಿಕ್ಷೆಯೆ?

Father tortures daughter as she is daughter
ಏ. 11 ಬುಧವಾರ ಬೆಳಗ್ಗೆ 11 ಗಂಟೆಗೆ ಮಗು ನಿಧನಹೊಂದಿತು.

ಬೆಂಗಳೂರು, ಏ. 9 : ಆ ಪುಟಾಣಿ ಮೂರು ತಿಂಗಳ ಮಗುವಿನ ಪೃಷ್ಠ ಸೇರಿದಂತೆ ದೇಹದ ಮೇಲೆಲ್ಲ ಸಿಗರೇಟಿನ ಸುಟ್ಟ ಗಾಯಗಳಾಗಿವೆ. ಮುಖದ ಮೇಲೆ ಗುದ್ದಿದ್ದರಿಂದ ಕುತ್ತಿಗೆಯ ಮೂಳೆಗಳು ಸರಿದಿವೆ. ಜೀವನ್ಮರಣದ ಹೋರಾಟ ನಡೆಸುತ್ತಿರುವ ಏನೂ ಅರಿಯದ ಆ ಕಂದಮ್ಮನ ಉಳಿಸಿಕೊಳ್ಳಲು ವೈದ್ಯರು ಸತತ ಪ್ರಯತ್ನ ನಡೆಸಿದ್ದಾರೆ.

ಇಷ್ಟೆಲ್ಲ ದೈಹಿಕ ದಬ್ಬಾಳಿಕೆಗಳಾಗಿರುವುದು ಆ ಮಗು ಹೆಣ್ಣುಮಗು ಎಂಬ ಕಾರಣಕ್ಕಾಗಿ. ಆಕೆಯ ಹೆಸರು ಅಫ್ರೀನ್ ಹೆಣ್ಣಾಗಿ ಹುಟ್ಟಿದ್ದಕ್ಕೆ ಈ ಪರಿ ಶಿಕ್ಷೆಯೆ? ಆ ರಾತೀ ಪೈಶಾಚಿಕ ಕೃತ್ಯ ಎಸಗಿದವನು ವರದಕ್ಷಿಣೆ ಭೂತವನ್ನು ಬಡಿಸಿಕೊಂಡಿರುವ ಸ್ವಂತ ಅಪ್ಪ. ಮತ್ತು ಈ ಘಟನೆ ಆಗಿರುವುದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ. ವಾಣಿ ವಿಲಾಸ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿರುವ ಮಗುವಿಗೆ ರಕ್ತಸ್ರಾವವಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ನಡೆದಿರುವುದಿಷ್ಟು : ರೇಶ್ಮಾ ಭಾನುಳನ್ನು ಮದುವೆಯಾಗಿದ್ದ ಫಾರೂಕ್ ಎಂಬಾತ, ತನಗೆ ಹೆಣ್ಣುಮಗು ಹುಟ್ಟಿದರೆ ಹೆಂಡತಿಯ ತವರು ಮನೆಯವರು 1 ಲಕ್ಷ ರು. ವರದಕ್ಷಿಣೆ ಬೇಡಿಕೆ ಇಟ್ಟಿದ್ದ. ಹೆಣ್ಣು ಹುಟ್ಟಿ ಮೂರು ತಿಂಗಳಾದರೂ ಹಣ ನೀಡದ್ದರಿಂದ ಮಗುವನ್ನೇ ಸಾಯಿಸಿಬಿಡಲು ಫಾರೂಕ್ ನಿರ್ಧರಿಸಿಬಿಟ್ಟ. ಮಗು ತೀವ್ರವಾಗಿ ಗಾಯಗೊಂಡ ನಂತರ ಅದನ್ನು ಕೂಡಲೆ ಆಸ್ಪತ್ರೆಗೆ ಸೇರಿಸಲು ಕೂಡ ಗಂಡನ ಮನೆಯವರು ಒಪ್ಪಲಿಲ್ಲ ಎಂದು ಮಗುವಿನ ಅಮ್ಮ ರೇಶ್ಮಾ ದೂರಿದ್ದಾಳೆ.

ಕೆಲ ತಿಂಗಳುಗಳ ಹಿಂದೆ ಎರಡು ವರ್ಷದ ಮಗು ಬೇಬಿ ಫಾಲಕ್ ತೀವ್ರ ಹಲ್ಲೆಗೊಳಗಾಗಿ, ಆಸ್ಪತ್ರೆಯಲ್ಲಿ ಹೋರಾಟ ನಡೆಸಿ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಮೃತಳಾಗಿದ್ದಳು. ಬೇಬಿ ಫಾಲಕ್‌ಗೆ ಆದ ದುರ್ವಿಧಿ ಬೇಬಿ ಅಫ್ರೀನ್‌ಗೂ ಆಗದಿರಲಿ ಎಂದು ಆಕೆಯ ಸಂಬಂಧಿಗಳು ಆಶಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+