ರಾಜ್ಯ ನೌಕರರಿಗೆ ವಾರಕ್ಕೆ ಐದೇ ದಿನ ಭಾಗ್ಯವಿಲ್ಲ

no-5-day-week-for-karnataka-govt-employees-dvs
ಬೆಂಗಳೂರು, ಏ.5: ತಮ್ಮ ಚೊಚ್ಚಲ ಬಜೆಟಿನಲ್ಲಿ ಸರಕಾರಿ ಉದ್ಯೋಗಿಗಳಿಗೆ ಭರಪೂರವಾಗಿ ಯುಗಾದಿ ಹೋಳಿಗೆ ಉಣಬಡಿಸಿದ್ದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಇದೀಗ ಉಗಾದಿ ಕಹಿಯನ್ನೂ ವಿತರಿಸಿದ್ದಾರೆ.

ಏನಪಾ ಅಂದರೆ ಸರಕಾರಿ ಉದ್ಯೋಗಿಗಳು ಈಗಿರುವಂತೆ ವಾರಕ್ಕೆ 6 ದಿನ ಕೆಲಸ ಮಾಡಲೇಬೇಕು ಎಂದು ಸದಾನಂದ ಗೌಡರು ಸ್ಪಷ್ಟಪಡಿಸಿದ್ದಾರೆ. ವೇತನ ಆಯೋಗದ ಅಧ್ಯಕ್ಷರು, ಹಿರಿಯ ಅಧಿಕಾರಿಗಳು ಮತ್ತು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಗುರುವಾರ (ಏ. 5) ನಡೆಸಿದ ಸಭೆಯಲ್ಲಿ ಸದಾನಂದ ಗೌಡರು ಈ ವಿಷಯ ಪ್ರಕಟಿಸಿದ್ದಾರೆ. ಇದರಿಂದ ಲಕ್ಷಾಂತರ ಸರ್ಕಾರಿ ನೌಕರರ ಮೊಗದಲ್ಲಿ ಅರಳಿದ್ದ ಮಂದಹಾಸ ಹಾಗೇ ಮಾಯವಾಗಿದೆ.

6ನೇ ವೇತನ ಆಯೋಗವು ಸರಕಾರಿ ನೌಕರರಿಗೆ ಇನ್ನು ಮುಂದೆ ವಾರಕ್ಕೆ ಐದೇ ದಿನ ಕೆಲಸವಿರಲಿ ಎಂದು ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಅದಕ್ಕೆ ಮುಖ್ಯಮಂತ್ರಿ ಸದಾನಂದ ಗೌಡರು ಅಂಕಿತ ಹಾಕುತ್ತಾರೆ ಎಂಬ ಮಾತು ಚೈತ್ರ ಕಾಲದ ಗಾಳಿಯಲ್ಲಿ ತೇಲಿ ಬಂದಿತ್ತು.

ಆದರೆ ತಾಂತ್ರಿಕವಾಗಿ ವಾರಕ್ಕೆ 5 ದಿನಗಳ ಸರಕಾರಿ ನೌಕರಿ ಕಾಲ್ಪನಿಕ ಅಷ್ಟೆ. ಆದ್ದರಿಂದ ವಾರಕ್ಕೆ 6 ದಿನ ಕೆಲಸ ಮಾಡಲೇಬೇಕು ಎಂದು ಗೌಡರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+