ತಿಮ್ಪಪ್ಪನ ಸನ್ನಿಧಿಯಲ್ಲಿ ಎಲ್ಲೆಲ್ಲಿ ಲಂಚ ಇದೆ ಗೊತ್ತಾ?

tirupati-tirumala-devasthanams-corruption-rampant
ತಿರುಪತಿ, ಏ.5: ತಿರುಪತಿಯ ವೆಂಕಟೇಶ್ವರನ ಸನ್ನಿಧಿಯಲ್ಲಿ ಎಷ್ಟೆಲ್ಲ, ಎಲ್ಲೆಲ್ಲ ಮತ್ತು ಏನೆಲ್ಲ ಭ್ರಷ್ಟಾಚಾರ ನಡೆಯುತ್ತದೆ ಗೊತ್ತಾ?

ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ (TTD) ಸುಪರ್ದಿಯಲ್ಲಿ 98 ವಿವಿಧ ವಿಭಾಗಗಳಲ್ಲಿ 10 ಸಾವಿರಕ್ಕೂ ಹೆಚ್ಚು ನೌಕರರು ಇದ್ದಾರೆ. ವಾರ್ಷಿಕ ಬಜೆಟ್ ಗಾತ್ರ 2,000 ಕೋಟಿ ರು. ದಾಟುತ್ತಿದೆ. ಇಂತಿಪ್ಪ ತಿಮ್ಮಪ್ಪ ದೇವಸ್ಥಾನದಲ್ಲಿ ಲಂಚಾವತಾರ ತಾಂಡವವಾಡುತ್ತಿರುವುದು ಅತಿಶಯೋಕ್ತಿಯೇನೂ ಅಲ್ಲ.

1+1 ಎಂಬುದು ಇಲ್ಲಿನ ಕೋಡ್ ವರ್ಡ್. ಅಂದರೆ TTDಯಿಂದ ಯಾವುದೇ ಕೆಲಸ ಆಗಬೇಕೆಂದರೂ ಒಂದು ಪಾಲು ವೇಂಕಟರಮಣನಿಗೆ ಸಂದಾಯವಾದರೆ ಅದರಷ್ಟೇ ಪಾಲು ಲಂಚವಾಗಿ ಭ್ರಷ್ಟರ ಜೇಬು ಸೇರುತ್ತದೆ. 1,500 ರು. ಬಾಡಿಗೆಯ ಒಂದು ಎಸಿ ರೂಮ್ ಬೇಕೆಂದರೆ 5,000 ರು. ಪಾವತಿಸಬೇಕು. ಅದರಲ್ಲಿ 1,500 ರು. ಕಮೀಷನ್ ಸಂದಾಯವಾದರೆ ಉಳಿದ 2,000 ದರ್ಶನ ಮತ್ತು ಪ್ರಸಾದಕ್ಕೆ ವಿನಿಯೋಗವಾಗುತ್ತದೆ.

ಇನ್ನು ಅನೇಕ ಎಸಿ ರೂಮ್ ಗಳು ಯಾವಾಗಲೂ ರಿಪೇರಿಯಲ್ಲೇ ಇರುತ್ತವೆ. ಎಷ್ಟು ಎಸಿಗಳು ಕಾರ್ಯನಿರ್ವಹಿಸುತ್ತಿವೆ ಎಂಬುದರ ಲೆಕ್ಕವೇ ಇರುವುದಿಲ್ಲ. ಆದರೂ ಹೊಸ ಹೊಸ ಎಸಿಗಳು ಬಂದು ಬೀಳುತ್ತಿರುತ್ತವೆ. ಕಮೀಷನ್ ಯತೇಚ್ಛವಾಗಿ ಸಂದಾಯವಾಗುತ್ತಿರುತ್ತದೆ. ಇನ್ನು ಸಾಮಾನ್ಯ ಕೊಠಡಿಗಳಲ್ಲಿ ಜನಸಾಮಾನ್ಯರ ಪಾಡು ಆ ತಿಮ್ಮಪ್ಪನಿಗೇ ಪ್ರೀತಿ.

ತಲೆಗೂದಲು ಕೊಡುವ ಸ್ಥಳದಲ್ಲಿ ತಲೆಗೂದಲು ತೆಗೆಯುವ ಬಾರ್ಬರ್ ಗಳು (ಮಹಿಳೆಯರೂ ಇದರಲ್ಲಿ ಕಮ್ಮಿಯೇನೂ ಇಲ್ಲ) ತಲೆಗೆ 50-100 ರು. ಪೀಕುತ್ತಾರೆ. ಇವರ ಸಂಖ್ಯೆಯೇ 500 ದಾಟುತ್ತದೆ. ಈ ಬಾರ್ಬರ್ ಗಳ ಒಕ್ಕೂಟ ಅಧ್ಯಕ್ಷನೊಬ್ಬ TTD ಅಧಿಕಾರಿಗೆ ಕಪ್ಪುಕಾಣಿಕೆ ಸಲ್ಲಿಸುವುದು ಇತ್ತೀಚೆಗೆ CCTVಯಲ್ಲಿ ದಾಖಲಾಗಿತ್ತು.

TTD ಮುದ್ರಣಾಲಯವಿದೆ. ಇಲ್ಲಿ ಸಾವಿರಾರು ಪುಸ್ತಕಗಳು ಮುದ್ರಣಗೊಳ್ಳುತ್ತಿರುತ್ತವೆ. ಇಲ್ಲಿ ಕನಿಷ್ಠ 150 ಕೋಟಿ ಭ್ರಷ್ಟಾಚಾರವು ವಾರ್ಷಿಕ ವಿಧಿಯಂತೆ ಸಾಂಗೋಪಾಂಗವಾಗಿ ನೆರವೇರುತ್ತದೆ. ಲಡ್ಡು ಬಗ್ಗೆ ಮಾತನಾಡದಿರುವುದು ಒಳಿತು. ಭ್ರಷ್ಟಾಚಾರದ ಗಣಿಯಿದು. ಡೀಸೆಲ್ ಬಂಕ್ ಇದೆ. ಎಷ್ಟು ಡೀಸೆಲ್ ಬಂತು, ಮಧ್ಯೆ ಎಷ್ಟು ಸೋರಿ ಹೋಯಿತು? ಅದು ಆ ತಿಮ್ಮಪ್ಪನಿಗೂ ತಿಳಿಯದು.

ಇದು ಆಂತರಿಕ ಭ್ರಷ್ಟಾಚಾರದ ಪರಿಯಾದರೆ ಇನ್ನು ಬಾಹ್ಯ ಲಂಚಾವತಾರದ ಸ್ಯಾಂಪಲ್ ಹೀಗಿದೆ: ಇಲ್ಲಿನ ಹೋಟೆಲುಗಳು ಟ್ರಾವೆಲ್ ಏಜೆಂಟ್ ಸಂಸ್ಥೆಗಳ ಜತೆಸೇರಿ ತಿಮ್ಮಪ್ಪನ ಸೇವೆ ಮತ್ತು ದರ್ಶನ ಭಾಗ್ಯದಲ್ಲಿ ನಡೆಯುವ ಅವ್ಯವಹಾರ ಅಗಣಿತ. ಇದೆಲ್ಲವನ್ನೂ ಖುದ್ದು ಆಂಧ್ರದ vigilance and enforcement department ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+