ಮಕ್ಕಳ ಕಳ್ಳಿ ಎಂದು ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ

ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಳ್ಳತನ ನಡೆಯುತ್ತಿರುವುದು ಜನರಲ್ಲಿ ಕಳವಳ ಮೂಡಿಸಿತ್ತು. ಆತಂಕಕ್ಕೀಡಾಗಿರುವ ಜನರು ಯಾವುದೇ ವ್ಯಕ್ತಿಯ ಮೇಲೆ ಸ್ವಲ್ಪ ಅನುಮಾನ ಬಂದರೂ ಹಿಂದೆ ಮುಂದೆ ನೋಡದೆ ಥಳಿಸಲು ಶುರುಮಾಡಿದ್ದಾರೆ. ಸೋಮವಾರ ಇಬ್ಬರು ವ್ಯಕ್ತಿಗಳನ್ನು ಥಳಿಸಲಾಗಿದೆ.
ಗುರುವಾರ ಜುಹಾಪುರ ನಗರದಲ್ಲಿ ಆಗಿರುವುದು ಕೂಡ ಇದೆ. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮಿ ದೇವಿಪೂಜಾಕ್ ಹಣ ಇಸಿದುಕೊಳ್ಳಲು ಮಾಲಿಕನ ಮನೆಗೆ ಬಂದಾಗ ಮಕ್ಕಳ ಕಳ್ಳಿ ಎಂದು ತಪ್ಪಾಗಿ ತಿಳಿದು ಸಾರ್ವಜನಿಕರು ಆಕೆಯ ಬಟ್ಟೆಯನ್ನು ಬಿಚ್ಚಿಸಿ ಮನಬಂದಂತೆ ಹೊಡೆದಿದ್ದಾರೆ.
ಇಷ್ಟು ಮಾತ್ರವಲ್ಲದೆ, ಆಕೆಯನ್ನು ಕಾಪಾಡಲು ಬಂದ ಪೊಲೀಸರ ಜೀಪಿನ ಪಂಕ್ಚರ್ ಜನರು ಮಾಡಿದ್ದಾರೆ. ಲಾಠಿ ಚಾರ್ಜ್ ಮಾಡಲು ಬಂದ ಪೊಲೀಸರ ಮೇಲೆ ಕಲ್ಲು ತೂರಾಟ ಕೂಡ ಮಾಡಿದ್ದಾರೆ. ಆಕೆಯನ್ನು ಕಾಪಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು.
ರೊಚ್ಚಿಗೆದ್ದಿದ್ದ ಸಾರ್ವಜನಿಕರಿಂದ ಲಕ್ಷ್ಮಿಯನ್ನು ಕಾಪಾಡಲು ಪೊಲೀಸರು ಕೊನೆಗೂ ಸಫಲರಾದರು. ನಂತರ ನಡೆದ ವಿಚಾರಣೆಯಲ್ಲಿ ಆಕೆ ಅಮಾಯಕಳು ಎಂದು ತಿಳಿದುಬಂದಿದೆ. ಮಾಲಿಕನ ಮನೆ ಹುಡುಕೊಂಡು ಬಂದಿದ್ದ, ಪಶ್ಚಿಮ ಬಂಗಾಳದ ಲಕ್ಷ್ಮಿ ದಾರಿ ತಪ್ಪಿದ್ದರಿಂದ ವಿಳಾಸ ವಿಚಾರಿಸುತ್ತಿದ್ದಳು. ಆಕೆಯನ್ನು ಮಕ್ಕಳ ಕಳ್ಳಿ ಎಂದು ತಿಳಿದದ್ದೇ ಮುಂದಿನ ಘಟನೆಗೆ ಕಾರಣವಾಯಿತು.












Click it and Unblock the Notifications