ನನ್ನ ವಿರುದ್ಧ ತಕ್ಷಣ ಸಿಬಿಐ ತನಿಖೆಯಾಗಲಿ-ನಿತ್ಯಾನಂದ

ರಾಜ್ಯ ಸಿಐಡಿ ಪೊಲೀಸರು ಕೋರ್ಟಿನಲ್ಲಿ ತಮ್ಮ ವಿರುದ್ಧ ಆರೋಪಪಟ್ಟಿ ದಾಖಲಿಸಿರುವುದರ ಹಿನ್ನೆಲೆಯಲ್ಲಿ ಸ್ವಾಮಿ ನಿತ್ಯಾನಂದ ಬಿಡದಿ ಬಳಿಯ ಧ್ಯಾನಪೀಠ ಆಶ್ರಮದಲ್ಲಿ ಈ ಸುದ್ದಿಗೋಷ್ಠಿ ನಡೆಸಿದ್ದಾರೆ. ಮುಖ್ಯಾಂಶಗಳು:
* ನನ್ನ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ
* ನಟಿ ರಂಜಿತಾ ಸಹ ನನ್ನ ವಿರುದ್ಧ ಯಾವುದೇ ಆರೋಪ ಮಾಡಿಲ್ಲ
* ಲೆನಿನ್ ಸೇರಿದಂತೆ ನನ್ನ ವಿರುದ್ಧ ದೂರು ಕೊಟ್ಟಿರುವವರೆಲ್ಲ ಕ್ರಿಮಿನಲ್ ಗಳು
* ಆರೋಪ ಮಾಡಿದ್ದ ಲೆನಿನ್ ಜೈಲಿನಲ್ಲಿದ್ದಾನೆ
* ನಾನು ಹೈಕೋರ್ಟಿನಲ್ಲಿ ರಿಟ್ ಸಲ್ಲಿಸುವೆ; ನನ್ನ ವಿರುದ್ಧ ಸಿಬಿಐ ತನಿಖೆ ನಡೆಯಲಿ
* ಈ ಕ್ಷಣವೇ ನಾನು ತನಿಖೆಗೆ ಸಿದ್ಧ
* ನನ್ನನ್ನು ರಕ್ಷಿಸಿಕೊಳ್ಳಲು ಕೋರ್ಟಿಗೆ ಮೊರೆ ಹೋಗುವೆ
* ನನ್ನ ವಿರುದ್ಧ ಅನವಶ್ಯಕವಾಗಿ ಆರೋಪ ಮಾಡಲಾಗಿದೆ
* ನನ್ನ ವಿರುದ್ಧ ನಿರಂತರ ಅವಹೇಳನ ಮಾಡಲಾಗುತ್ತಿದೆ. ಇದು ಸಲ್ಲದು
* ಕೆಲವರಿಂದ ನನಗೆ ನಿರಂತರ ಕಿರುಕುಳ
* ಅಮೆರಿಕದ ಪ್ರಯೋಗಾಲಯವೇ ವಿಡಿಯೋ ತಿರುಚಿರುವ ಬಗ್ಗೆ ವರದಿ ನೀಡಿದೆ
* ವಿಶ್ವದ 100 ಮಂದಿ ಪ್ರಭಾವಿಗಳ ಪೈಕಿ ನಾನೂ ಒಬ್ಬ












Click it and Unblock the Notifications