ಸಾಂತ್ವನ ಯಾತ್ರೆ:ಬಂಧನ ತಪ್ಪಿಸಿಕೊಳ್ಳಲು ಜಗನ್ನಾಟಕ

'ಓದಾರ್ಪು ಯಾತ್ರೆ' ಹೆಸರಿನಲ್ಲಿ ಜನಗಳ ಮಧ್ಯೆ ಇದ್ದರೆ ಸಿಬಿಐ ಪೊಲೀಸರು ತನ್ನನ್ನು ಬಂಧಿಸಲು ಹೀಂದೇಟು ಹಾಕುತ್ತಾರೆ ಎಂಬುದು ಜಗನ್ ಎಣಿಕೆ. ಅದಕ್ಕಾಗಿಯೇ ಅವಯ್ಯ ತಂದೆ ಮರಣಾನಂತರ ಒಂದೂವರೆ ವರ್ಷದಿಂದ ಆ ಊರತು ಈ ಊರು ಅಂತ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳ ಮಧ್ಯೆ ಠಳಾಯಿಸುತ್ತಿದ್ದಾರೆ. ಈ ಮಧ್ಯೆ, ಸಿಬಿಐ ಮೂರು ಬಾರಿ ಜಗನ್ ಬಂಧನಕ್ಕೆ ಮುಂದಾಗಿತ್ತಾದರೂ ಜನಾನ್ನ ನೋಡಿ ಹಿಂದೆಸರಿದಿದೆ. ಆದರೂ ಅವಕಾಶಕ್ಕಾಗಿ ಹೊಂಚುಹಾಕುತ್ತಲೇ ಇದೆ.
ಸರಣಿ ಚಾರ್ಜ್ ಶೀಟ್: ಹಾಗೆ ನೋಡಿದರೆ ಯಾವೊಬ್ಬ ರಾಜಕೀಯ ನಾಯಕನೂ ಇಷ್ಟೊಂದು ಸುದೀರ್ಘ ಕಾಲ ಜನರ ಮಧ್ಯೆ ಕಾಲ ಕಳೆದಿಲ್ಲ. ಇದರ ಉದ್ದೇಶ ಸಾಂತ್ವನ ಗಿಟ್ಟಿಸುವುದಲ್ಲ; ಬದಲಿಗೆ ಬಂಧನ ತಪ್ಪಿಸಿಕೊಳ್ಳುವುದು ಎಂದು ಸಿಬಿಐ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ. ಸಿಬಿಐ ಜಂಟಿ ನಿರ್ದೇಶಕ ವಿವು ಲಕ್ಷ್ಮಿನಾರಾಯಣ ಅವರ ಪ್ರಕಾರ ಜಗನ್ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಪಟ್ಟಿಗಳು ದಾಖಲಾಗಲಿದ್ದು, ಅವುಗಳಲ್ಲಿ ಜಗನ್ ಬಂಧನಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾರೆ.
ಜಗನ್ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶನಿವಾರ ಸಿಬಿಐ ಆರೋಪಪಟ್ಟಿ ದಾಖಲಿಸುತ್ತಿದ್ದಂತೆ ಜಗನ್ ಎದೆ ಬಡಿತ ತೀವ್ರವಾಗಿದೆ. ಗುಂಟೂರಿನಲ್ಲಿದ್ದ ತನ್ನ ನಾಯಕ ಜಗನ್ ನನ್ನು ರಕ್ಷಿಸಿಕೊಳ್ಳಲು ಜಗನ್ ಕಟ್ಟಾಳುಗಳು ಅವರ ಸುತ್ತ ಭದ್ರಕೋಟೆ ನಿರ್ಮಿಸಿದ್ದಾರೆ.
ಈ ವಾರ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಓದಾರ್ಪು ಯಾತ್ರೆ ಮುಂದುವರಿಸಲಿದ್ದಾರೆ. ಈ ವಾರದಲ್ಲಿ ಈ ಜಿಲ್ಲೆಯಲ್ಲೇ ಜಗನ್ ಬಂಧನವಾಗುತ್ತದಾ?












Click it and Unblock the Notifications