ಜಗನ್ ಅಕ್ರಮಗಳು ಜಾಮೀನುರಹಿತ: ಬಂಧನ ಖಚಿತ

illegal-assets-jagan-offences-non-bailable-nia-pp
ಹೈದರಾಬಾದ್, ಏ.2: ಸುಮ್ಮನೆ ಹಾಗೇ ... 2 ಜಿ ಹಗರಣದ ಆರೋಪಿ ಕನ್ನಿಮೋಳಿ ಪ್ರಕರಣದಲ್ಲಿ ಏನಾಗಿತ್ತೆಂದರೆ ... ವರ್ಷದ ಹಿಂದೆ ಏಪ್ರಿಲ್ 25 ರಂದು ಕನ್ನಿಮೋಳಿ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತು. ಮೇ 6ರಂದು ಕೋರ್ಟಿಗೆ ಹಾಜರಾಗುವಂತೆ ಸಮನ್ಸ್ ಜಾರಿ. ಜಾಮೀನು ಕೋರಿ ಕನ್ನಿಮೋಳಿ ಸಲ್ಲಿಸಿದ ಅರ್ಜಿ ತಿರಸ್ಕೃತ, ತಕ್ಷಣ ಬಂಧನಕ್ಕೆ ಆದೇಶ. ಮುಂದೆ ನವೆಂಬರಿನಲ್ಲಿ ಜಾಮೀನು ಸಿಗುವವರೆಗೂ ತಿಹಾರ್ ಜೈಲುಹಕ್ಕಿಯಾದ ಕನ್ನಿಮೋಳಿ.

ಇದೀಗ ಅಕ್ರಮ ಆಸ್ತಿಯ ಸರದಾರ, ವೈಎಸ್ಆರ್ ಕಾಂಗ್ರೆಸ್ ಅಧಿನಾಯಕ ಜಗನ್ ಮೋಹನ್ ರೆಡ್ಡಿ ಪ್ರಕರಣದಲ್ಲಿ National Investigation Agency special public prosecutor ಪಿ. ವಿಷ್ಣುವರ್ಧನ ರೆಡ್ಡಿ ಏನನ್ನುತ್ತಾರೆ? ...

A1 ಜಗನ್ ಮೋಹನ್ ರೆಡ್ಡಿ ಮತ್ತು ಸಹ ಆರೋಪಿಗಳ ಅಪರಾಧಗಳು non-bailable. ವಾರಂಟ್ ಕೇಸುಗಳು ಮತ್ತು ಸಮನ್ಸ್ ಕೇಸುಗಳು ಇವೆ. ಯಾವುದೇ ಅಪರಾಧಕ್ಕೆ ಮೂರು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾಗುವಂತಿದ್ದರೆ ಪ್ರಕರಣದ ಆರೋಪಿಗೆ ವಾರಂಟ್ ಜಾರಿಯಾಗುತ್ತದೆ. ಅದೇ ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗುವಂತಿದ್ದರೆ ಪ್ರಕರಣದ ಆರೋಪಿಗೆ ಸಮನ್ಸ್ ನೀಡಲಾಗುತ್ತದೆ.

ಚಾರ್ಜ್ ಶೀಟ್ ಆಧರಿಸಿ ಅಪರಾಧ ಸ್ವರೂಪವನ್ನು ನಿರ್ಧರಿಸುವುದು ಕೋರ್ಟ್ ವಿವೇಚನೆಗೆ ಬಿಟ್ಟ ವಿಷಯ. ವಾರಂಟ್ ಪ್ರಕರಣದಲ್ಲಿ ಸಮನ್ಸ್ ಸಹ ಜಾರಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು. ತಾಜಾ ಆಗಿ ಕನ್ನಿಮೋಳಿ ಪ್ರಕರಣದಲ್ಲಿ ಇದೇ ಆಗಿದ್ದು. ಆದ್ದರಿಂದ ಜಗನ್ ಬಂಧನ ಸಾಧ್ಯತೆಗಳು ಅಧಿಕವಾಗಿವೆ. ಇದರ ಹೊರತಾಗಿಯೂ Section 41 of CRPC ಅನುಸಾರ ಪೊಲೀಸರು ಆರೋಪಿಯನ್ನು ಯಾವಾಗ ಬೇಕಾದರೂ ಬಂಧಿಸಬಹುದು ಎನ್ನುತ್ತಾರೆ PP ವಿಷ್ಣುವರ್ಧನ ರೆಡ್ಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+