ಸಿಬಿಐ ಲಕ್ಷ್ಮಿನಾರಾಯಣಗೆ ಸಿಕ್ತು 'ವೈ' ಭದ್ರತೆ
ಹೈದರಾಬಾದ್,
ಏ.2: ಹೈ ಪ್ರೊಫೈಲ್ ಪ್ರಕರಣಗಳ ಬೆನ್ನುಹತ್ತಿರುವ ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಅವರ ಬೆನ್ನಿಗೆ ಜೀವಭಯ ಎಂಬ ಗುಪ್ತಚರ ಇಲಾಖೆ ಮಾಹಿತಿಯನ್ನಾಧರಿಸಿ ಈ ಖಡಕ್ ಅಧಿಕಾರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿಶೇಷ ಭದ್ರತೆ ಕಲ್ಪಿಸಲಾಗಿದೆ. 'Y' ಶ್ರೇಣಿಯ ಭದ್ರತೆ, ಬುಲೆಟ್ ಪ್ರೂಫ್ ಕಾರನ್ನು ಅವರ ರಕ್ಷಣೆಗೆ ಕಲ್ಪಿಸಲಾಗಿದೆ. id="toptextpromo">ಇದುವರೆಗೆ
ಯಾವುದೇ ಭದ್ರತೆಯಿಲ್ಲದೆ ಸಾಮಾನ್ಯವಾಗಿ ಓಡಾಡಿಕೊಂಡಿದ್ದ ಲಕ್ಷ್ಮಿನಾರಾಯಣ ಅವರ ರಕ್ಷಣೆಗೆ ಈಗ ಸಶಸ್ತ್ರ ಗನ್ ಮನ್ ಗಳಿಬ್ಬರು ದಿನದ 24 ಗಂಟೆಯೂ ನಿಲ್ಲಲಿದ್ದಾರೆ. ಗುಪ್ತಚರ ಇಲಾಖೆ ಗುಂಡು ನಿರೋಧಕ ಕಾರನ್ನು ಒದಗಿಸಲಿದೆ. ಇನ್ನು ಎಸ್ಕಾರ್ಟ್ ಪೊಲೀಸರನ್ನು ಹೈದರಾಬಾದ್ ನಗರ ಪೊಲೀಸರು ನೀಡಲಿದ್ದಾರೆ. ಕೋಟಿ ಕಚೇರಿಯಲ್ಲಿರುವ ಸಿಬಿಐ ಕಚೇರಿ ಮತ್ತು ಲಕ್ಷ್ಮಿನಾರಾಯಣ ಅವರ ನಿವಾಸಕ್ಕೂ ಈ ಭದ್ರತೆ ಹಾಕಲಾಗಿದೆ. id='are-slot-1' class='oiad oi-axt oiadv'> id='top-searched-articles'>'ತಕ್ಷಣಕ್ಕೆ
ಯಾವುದೇ ಬೆದರಿಕೆ ಕರೆ ಮತ್ತಿತರ ಅಪಾಯಗಳ ಮುನ್ಸೂಚನೆ ಬಂದಿಲ್ಲವಾದರೂ ಗುಪ್ತಚರ ಇಲಾಖೆ ಮಾಹಿತಿಯನುಸಾರ ತುರ್ತು ಸಭೆ ಸೇರಿ ವಿವಿ ಲಕ್ಷ್ಮಿನಾರಾಯಣಗೆ ಈ ಭದ್ರತೆ ಒದಗಿಸಲು ನಿರ್ಧರಿಸಲಾಯಿತು' ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.











Click it and Unblock the Notifications