ಎಂಜಿ ರಸ್ತೆಯ ಹೆಮ್ಮೆಯ ಗಂಗಾರಾಮ್ಸ್ ಯುಗಾಂತ್ಯ

ಬೆಂಗಳೂರು, ಏ.2: "Gangarams has been a milestone in my experience of Bangalore ever since I first came here," ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಸಂದರ್ಶಕರ ಪುಸ್ತಕದಲ್ಲಿ ಬರೆಯುವ ಮನಸ್ಸು ಭಾರವಾಗಿತ್ತು.

ನಗರದ ಮಹಾತ್ಮಗಾಂಧಿ ರಸ್ತೆಯ ಹೆಮ್ಮೆಯ ತಾಣವಾಗಿದ್ದ ಗಂಗಾರಾಮ್ಸ್ ಬುಕ್ ಮಳಿಗೆ ನಾಲ್ಕು ದಶಕಗಳ ತನ್ನ ಯುಗವನ್ನು ಅಂತ್ಯಗೊಳಿಸಿದೆ. ಮಾ.31ರಂದು ಗಂಗಾರಾಮ್ಸ್ ಸ್ಟೇಷನರಿ ವಿಭಾಗ ತನ್ನ ಕಾರ್ಯವನ್ನು ಮುಕ್ತಾಯಗೊಳಿಸಿದೆ.

ಇದೀಗ ಬಂದ ಟ್ವೀಟ್ : RT: @gangarams: @OneindiaKannada #Gangarams isnt closing its only shiftin. V'll b movin abv koshys by May 2 know more flw @axisbooks /@gangarams

ಗಂಗಾರಾಮ್ಸ್ ಬುಕ್ ಬ್ಯೂರೋ ಮಳಿಗೆಯನ್ನು 2012ರ ಮೇ ತಿಂಗಳಿನಲ್ಲಿ ಮುಚ್ಚುವ ಸಾಧ್ಯತೆಯಿದೆ ಎಂದು ಮಾಲೀಕ ಆತ್ಮರಾಮ್ ಎನ್ ಗಂಗಾರಾಮ್ ಭಾವುಕರಾಗಿ ಹೇಳುತ್ತಾರೆ.

Gangarams Book Bureau Bangalore

'ಪುಸ್ತಕ ಮಳಿಗೆ ಎನ್ನುವುದಕ್ಕಿಂತ ಇದು ನನ್ನ ಮನೆಯ ಮತ್ತೊಂದು ಕೋಣೆ ಎನ್ನಿಸುತ್ತಿತ್ತು, ಗಂಗಾರಾಮ್ಸ್ ಗೆ ಭೇಟಿ ನೀಡುವುದು ನನ್ನ ನೆಚ್ಚಿನ ವಿಷಯವಾಗಿತ್ತು' ಎಂದು ಪ್ರಿಯಾ ಬರೆದಿದ್ದಾರೆ.

'ಅಂದಿನ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಅವರು ನಮ್ಮ ಮಳಿಗೆಗೆ ಬಂದು ತಮ್ಮ ಮಗಳಿಗಾಗಿ ಗ್ರಿಟಿಂಗ್ ಕಾರ್ಡ್ ಖರೀದಿಸಿದ್ದು ನನ್ನ ನೆನಪಲ್ಲಿ ಹಾಗೆ ಉಳಿದಿದೆ' ಎಂದು ಆತ್ಮರಾಮ್ ಹೇಳುತ್ತಾರೆ.

ಚಿತ್ರರಂಗ,ನಾಟಕರಂಗ, ಸಾಹಿತಿಗಳು ಸೇರಿದಂತೆ ಅನೇಕ ಗಣ್ಯರು ಗಂಗಾರಾಮ್ಸ್ ಪುಸ್ತಕ ಮಳಿಗೆಯ ಅಭಿಮಾನಿಗಳಾಗಿದ್ದಾರೆ. ಸ್ಟೇಷನರಿ ವಿಭಾಗ ಮಾ.31ಕ್ಕೆ ಖಾಲಿಯಾಗಿದೆ. ಬುಕ್ ಸ್ಟೋರ್ ಮೇ.31 ರಂದು ಮುಚ್ಚಲಾಗುತ್ತದೆ. ಜೂನ್ ಮೊದಲ ವಾರದಲ್ಲಿ ಹೊಸ ತಾಣ(ಕೋಶಿಸ್ ಕಟ್ಟಡ)ದಲ್ಲಿ ಮತ್ತೆ ಗಂಗಾರಾಮ್ಸ್ ತಲೆ ಎತ್ತುವ ಸಾಧ್ಯತೆಯಿದೆ ಎಂದು ಆತ್ಮರಾಮ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+