ಯಾಹೂ ಸಾವಿರಾರು ಉದ್ಯೋಗಿಗಳ ಕೆಲ್ಸಕ್ಕೆ ಕುತ್ತು

ಹೊಸ ಸಿಇಒ ಸ್ಕಾಟ್ ಥಾಮಸನ್ ಅಧಿಕಾರ ವಹಿಸಿಕೊಂಡ ನಂತರ ಇಂಟರ್ ನೆಟ್ ದಿಗ್ಗಜ ಯಾಹೂ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಯಾಹೂ ಸಂಸ್ಥೆ ನಿರ್ವಹಣೆಯನ್ನು ಪುನರ್ ರಚನೆ ಮಾಡಲಾಗುತ್ತದೆ.
ಬಹುಶಃ ಮುಂದಿನ ಕೆಲವಾರಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ವಿಭಾಗ ಹಾಗೂ ನೌಕರರ ವಿವರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಟೆಕ್ ಬ್ಲಾಗ್ ನಲ್ಲಿ ಹೇಳಲಾಗಿದೆ.
ಇಬೇ ಪೇಪಾಲ್ ನ ಮುಖ್ಯಸ್ಥರಾಗಿದ್ದ ಸ್ಕಾಟ್ ಥಾಮ್ ಸನ್ ಅವರು ಕರೋಲ್ ಬರ್ಟ್ಜ್ ನಂತರ ಯಾಹೂ ಸಂಸ್ಥೆಯನ್ನು ಮತ್ತೆ ಉತ್ತುಂಗಕ್ಕೇರಿಸಲು ಭಾರಿ ಸಿದ್ದತೆ ನಡೆಸಿದ್ದಾರೆ.
ಒಮ್ಮೆಗೆ ಅಷ್ಟು ಜನರನ್ನು ತೆಗೆದು ಹಾಕಿದರೆ ಯಾಗೂ ಪ್ರಾಡೆಕ್ಟ್, ಸಂಶೋಧನೆ ಹಾಗೂ ಮಾರ್ಕೆಟಿಂಗ್ ವಿಭಾಗಕ್ಕೆ ಭಾರಿ ಹೊಡೆತ ಬೀಳುತ್ತದೆ. ಹಾಗಾಗಿ ಸಮಯ ನೋಡಿಕೊಂಡು ಉದ್ಯೋಗಿಗಳ ವಜಾ ಕಾರ್ಯಕ್ಕೆ ಮುಂದಾಗಲು ಸಂಸ್ಥೆ ನಿರ್ಧರಿಸಿದೆ.
ಯಾಹೂ ಸಂಸ್ಥೆಯಲ್ಲಿ 14,000 ಉದ್ಯೋಗಿಗಳನ್ನು ಹೊಂದಿದೆ. ಫೇಸ್ ಬುಕ್ ಹಾಗೂ ಗೂಗಲ್ ನಿಂದ ಪ್ರತಿಸ್ಪರ್ಧೆ ಎದುರಿಸುತ್ತಿರುವ ಯಾಹೂ ಈಗ ತನ್ನ ಗಮನವನ್ನು ಮಾಧ್ಯಮ ಹಾಗೂ ಜಾಹೀರಾತು ಕ್ಷೇತ್ರದತ್ತ ಹರಿಸಲು ಯೋಜಿಸಿದೆ ಎಂಬ ಸುದ್ದಿ ಇದೆ.












Click it and Unblock the Notifications