'ನ್ಯಾ ಹೆಗ್ಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲೇ?'

should-file-defamation-case-against-santosh-hegde-bsy
ಶಿವಮೊಗ್ಗ, ಏ.1: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿನ್ನೆ ನಗರದಲ್ಲಿ ಭರ್ಜರಿ ಸನ್ಮಾನ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ವಿರುದ್ಧ ಮನಸೋಇಚ್ಛೆ ಹರಿಹಾಯ್ದರು. ನನ್ನ ಹೆಸರಿಗೆ ಅವರು ಮಸಿ ಬಳಿದರು ಎಂದು ಬಿಎಸ್‌ವೈ ಜರಿದರು:

'ನಾನು ದೂರವಾಣಿ ಕದ್ದಾಲಿಕೆ ಮಾಡಿದ್ದೇನೆ ಎಂದು ನನ್ನ ವಿರುದ್ಧ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆರೋಪಿಸಿದರು. ಅವರ ಬಗ್ಗೆ ಗೌರವವಿದೆ. ಆದರೆ ಇಂತಹ ಆರೋಪದ ಬಗ್ಗೆ ಸಾಕ್ಷಿ ಇದ್ದರೆ ಬಹಿರಂಗಪಡಿಸಲಿ. ಅಥವಾ ನಾನೇ ಮಾನನಷ್ಟ ಮೊಕದ್ದಮೆ ಹೂಡಲೇ?' ಎಂದು ಸವಾಲು ಎಸೆದರು. ಮೊನ್ನೆಯಷ್ಟೇ ಹಿರಿಯ ಪೊಲೀಸ್ ಅಧಿಕಾರೊಯೊಬ್ಬರು ಸಂತೋಷ್‌ ಹೆಗ್ಡೆ ಅವರ ವಿರುದ್ಧ FIR ದಾಖಲಿಸಿರುವುದು ಗಮನಾರ್ಹ.

'ಅವರ ಬಗ್ಗೆ ಗೌರವ ಇದ್ದುದರಿಂದಲೇ ಅವರ ಮನೆಯವರೆಗೆ ಹೋಗಿ ರಾಜೀನಾಮೆ ವಾಪಸ್ಸು ಪಡೆಯಿರಿ ಎಂದೆ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕಂಡು ಇದನ್ನು ತಡೆಯಲು ಮನಸ್ಸು ಮಾಡಿ ತನಿಖೆ ಮಾಡಿ ಎಂದು ಸೂಚಿಸಿದೆ. ಆದರೆ ಹೆಗಡೆ ಮಾಡಿದ್ದೇನು? ಯಾರು ಅಕ್ರಮ ಗಣಿಗಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೋ ಅಂತಹವರ ಹೆಸರನ್ನು ಬಿಟ್ಟು ಏನೂ ಮಾಡದ ನನ್ನ ಹೆಸರನ್ನು ಎಳೆ ತಂದರು. ನನ್ನನ್ನು ಆರೋಪಿಯನ್ನಾಗಿಸಲು ಪ್ರಯತ್ನಿಸಿದರು' ಎಂದು ಬಿಎಸ್‌ವೈ ಕೆಂಡಕಾರಿದರು.

'ನಾನು ಅಕ್ರಮ ಗಣಿಗಾರಿಕೆ ತಡೆಯಲು ಯತ್ನ ನಡೆಸಿ ಕೈಗೊಂಡ ಕಾರ್ಯಕ್ರಮಕ್ಕಾಗಿ ಪ್ರಧಾನ ಮಂತ್ರಿಗಳು ನನ್ನನ್ನು ಕರೆದು ಸನ್ಮಾನ ಮಾಡಬೇಕಿತ್ತು. ಗೋವಾದಲ್ಲಿ ನಾನು ಮಾಡಿದ ಕಾರಣಕ್ಕೆ ಅಲ್ಲಿನ ಗಣಿ ಹಗರಣ ಬೆಳಕಿಗೆ ಬಂದು ನಮ್ಮ ಪಕ್ಷ ಜಯಗಳಿಸಿತು ಎಂಬುದನ್ನು ಮರೆಯಬಾರದು' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+