4472 ಶಿಕ್ಷಕರ ನೇಮಕಕ್ಕೆ ವಾರದಲ್ಲಿ ಅಧಿಸೂಚನೆ

ರಾಜ್ಯದ ವಿವಿಧ ವಿವಿಧ ಶಾಲಾ-ಕಾಲೇಜುಗಳಲ್ಲಿ ಖಾಲಿಯಿರುವ 1765 ಪದವಿ ಪೂರ್ವ ಉಪನ್ಯಾಸಕರು, 1065 ಪ್ರೌಢಶಾಲೆ ಸಹ ಶಿಕ್ಷಕರು, 518 ಆದರ್ಶ ಶಾಲೆಗಳ ಶಿಕ್ಷಕರು, 1024 ರಾಷ್ಟ್ರೀಯ ಮಾಧ್ಯಮಿಕ ಶಾಲೆ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದ ಅವರು, ಈ ಎಲ್ಲ ಉಪನ್ಯಾಸಕರು, ಶಿಕ್ಷಕರ ನೇಮಕ ಪ್ರಕ್ರಿಯೆಗೆ ಒಂದು ವಾರದೊಳಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ವಿಧಾನಪರಿಷತ್‌ನಲ್ಲಿ ಶುಕ್ರವಾರ (ಮಾ. 30) ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಅರುಣ್ ಶಾಪೂರ್ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಕಾಗೇರಿ ಈ ಮಾಹಿತಿ ನೀಡಿದರು,
ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಲ್ಲ. ಆದರೆ ಬಯಲುಸೀಮೆ, ಮಲೆನಾಡು ಸೀಮೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅನುಪಾತದಲ್ಲಿ ವ್ಯತ್ಯಾಸವಿದೆ. ಆದ್ದರಿಂದ ಈ ಸಮಸ್ಯೆ ಬಗೆಹರಿಸಲು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.












Click it and Unblock the Notifications