ರಷ್ಯಾ ಅತಿ ದೊಡ್ಡ ಹಿಂದೂ ದೇಗುಲ ನೆಲಕ್ಕುರಳಲಿದೆ

ವೇದಿಕ್ ಕಲ್ಚರಲ್ ಸೆಂಟರ್ ತನ್ನ ಲೀಸ್ ಅವಧಿ ಮುಗಿಸಿದೆ. ಈ ಸ್ಥಳವನ್ನು ಖಾಲಿ ಮಾಡಬೇಕು ಎಂದು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ ಎಂದು ಕಲ್ಚರಲ್ ಸೆಂಟರ್‌ನ ಅಧ್ಯಕ್ಷ ಸುರೇನ್ ಕರಪತ್ಯನ್ ಹೇಳಿದ್ದಾರೆ. ತುರ್ತು ನೆರವು ನೀಡುವಂತೆ ರಷ್ಯಾದ ಅಧ್ಯಕ್ಷರು ಮತ್ತು ಭಾರತದ ರಾಷ್ಟ್ರಪತಿಯವರನ್ನು ವಿನಂತಿಸಲಾಗಿದೆ ಎಂದು ಸುರೇನ್ ಹೇಳಿದರು.
ನಮಗೆ ನ್ಯಾಯ ಸಿಕ್ಕಿಲ್ಲ. 49 ವರ್ಷದ ಲೀಸ್ ಒಪ್ಪಂದವಿದ್ದರೂ ನಮ್ಮನ್ನು ಅಕ್ರಮವಾಗಿ ಹೊರದಬ್ಬಲಾಗುತ್ತಿದೆ. 1992ರಲ್ಲಿ ಲೀಸ್ ಒಪ್ಪಂದಕ್ಕೆ ಸರಕಾರಿ ಸ್ವಾಮ್ಯದ ಸಂಶೋಧನಾ ಸಂಸ್ಥೆಯೊಂದರ ಸಹಿ ಹಾಕಿದ್ದೇವೆ. ಈಗ ಈ ಸಂಸ್ಥೆಯನ್ನು ಜಂಟಿ ಷೇರು ಕಂಪೆನಿ(GosNIIkhimanali)ಯಾಗಿ ಪರಿವರ್ತಿಸಲಾಗಿದೆ ಎಂದು ಸುರೇನ್ ಹೇಳಿದ್ದಾರೆ.
ಆದರೆ, ವಾಯವ್ಯ ಜಿಲ್ಲಾ ನ್ಯಾಯಾಲಯ ಸ್ಥಳೀಯ ಹಿಂದೂ ಧಾರ್ಮಿಕ ಸಂಸ್ಥೆಯಾಗಿರುವ ವೇದಿಕ್ ಸೊಸೈಟಿ ಆಫ್ ಸ್ಪಿರಿಚುವಲ್ ಡೆವಲಪ್‌ಮೆಂಟ್ ಮತ್ತು ಕಂಪೆನಿ ನಡುವೆ ಏರ್ಪಟ್ಟಿರುವ ಲೀಸ್ ಒಪ್ಪಂದವನ್ನು ರದ್ದು ಪಡಿಸಿ, ದೇಗುಲ ನೆಲಸಮಕ್ಕೆ ಅಸ್ತು ಎಂದಿದೆ.












Click it and Unblock the Notifications