ಜಗನ್ ಆರೋಪಿ ನಂ.1, ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ

CBI Chargesheet YS Jagan
ಹೈದರಾಬಾದ್, ಮಾ.31: ವೈಎಸ್ ಜಗನ್ ಮೋಹನ್ ರೆಡ್ಡಿ ಭವಿಷ್ಯಕ್ಕೆ ಸಿಬಿಐ ಸರಿಯಾದ ಕೊಡಲಿ ಪೆಟ್ಟು ಕೊಟ್ಟಿದೆ. ಅಕ್ರಮ ಅಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಪ ಸಂಸದ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಚಾರ್ಜ್ ಶೀಟ್ ತಯಾರಿಸಿ ಕೋರ್ಟಿಗೆ ಸಲ್ಲಿಸಿದೆ.

68 ಪುಟಗಳ ಚಾರ್ಜ್ ಶೀಟ್ ನಲ್ಲಿ ಜಗನ್ ರೆಡ್ಡಿ ಆರೋಪಿ ನಂ.1(A1) ಆಗಿದ್ದಾರೆ. ಉಳಿದಂತೆ 12 ಜನ ಆರೋಪಿಗಳಲ್ಲಿ ಐಎಎಸ್ ಅಧಿಕಾರಿಗಳು, ದೊಡ್ಡ ರಾಜಕಾರಣಿಗಳು ಇದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಸಚಿವರು, 8 ಐಎಎಸ್ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಗನ್ ಅಕ್ರಮ ಆಸ್ತಿ ಗಳಿಕೆ(ಈಗಿನ ಮೌಲ್ಯ ಅಂದಾಜು 365 ಕೋಟಿ ರು) ವಿರುದ್ಧ ಹಾಲಿ ಜವಳಿ ಸಚಿವ ಶಂಕರ್ ರಾವ್, ಟಿಡಿಪಿ ಸದಸ್ಯರು ಹಾಗೂ ಕಡಪ ಮೂಲದ ವಕೀಲರೊಬ್ಬರು ಸಿಬಿಐಗೆ ದೂರು ನೀಡಿದ್ದರು.

ಇದೇ ಮೊದಲು: ಜಗನ್ ಬಂಧಿಸಲು ಸಾಕಷ್ಟು ಪುರಾವೆಗಳು ಸಿಗದ ಕಾರಣ, ಬಂಧನದ ಅವಶ್ಯಕತೆ ಇಲ್ಲ ಎಂದು ಸಿಬಿಐ ತಂಡ ಷರಾ ಹಾಕಿದೆ.

ತನಿಖೆ ಇನ್ನೂ ಚಾಲ್ತಿಯಲ್ಲಿದೆ. ಹಾಗಾಗಿ ಪೂರಕ ಚಾರ್ಜ್ ಶೀಟ್ ನಲ್ಲಿ ಆರೋಪಿ ನಂ.1 ಜಗನ್ ಹೆಸರು ಸೇರಿಸುತ್ತೇವೆ ಎಂದು ವಿಶೇಷ ಕೋರ್ಟಿಗೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+