ವಿದ್ಯಾರ್ಥಿಗಳೇ, ರವಿಶಂಕರ್ ಗುರೂಜಿ ಮೇಲೆ ತಿರುಗಿ ಬೀಳಿ

ಇಲ್ಲಿನ ಮಹಾರಾಣಿ ವಿಜ್ಞಾನ ಕಾಲೇಜಿನ ಸಮಾರಂಭದಲ್ಲಿ ಮಾತನಾಡಿದ ಅವರು, 'ಈ ರೀತಿ ಹೇಳಿಕೆ ಹಿಂದೆ ಭಾರತೀಯ ಮಕ್ಕಳನ್ನು ವಿದ್ಯೆಯಿಂದ ವಂಚಿತರನ್ನಾಗಿ ಮಾಡುವ ಹುನ್ನಾರವಿದೆ' ಎಂದು ಹೇಳಿದರು.
'ಖಾಸಗಿ ಮತ್ತು ಕಾರ್ಪೋರೆಟ್ ಸಂಸ್ಕೃತಿಯಿಂದ ದೇಶದಲ್ಲಿ ಬಡವ ಮತ್ತು ಶ್ರೀಮಂತರ ನಡುವೆ ವ್ಯತ್ಯಾಸ ಹೆಚ್ಚುತ್ತಿದೆ. ಆರ್ಥಿಕ ಮತ್ತು ಸಾಮಾಜಿಕ ತಾರತಮ್ಯಗಳಿಂದ ನಕ್ಸಲರು ಹುಟ್ಟುತ್ತಾರೆ ಎನ್ನುವುದು ಅವರಿಗೆ ಗೊತ್ತಿಲ್ಲವೆ.
ಒಂದು ಕಡೆ ಸರ್ಕಾರ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಹೊರಟಿದೆ,ಇನ್ನೊಂದೆಡೆ ಧರ್ಮಗುರು ಎನಿಸಿಕೊಂಡವರು ಇಂತಹ ಹೇಳಿಕೆ ನೀಡುತ್ತಿರುವುದು ಖಂಡನೀಯ' ಎಂದು ಮಹಾದೇವ ಅವರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications