English Newspapersಗೆ ನಿಷೇಧ ಹೇರಿದ ಮಮತಾ

Mamata Banerjee
ಕೋಲ್ಕತ್ತಾ,ಮಾ.28: ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ನಶಿಸುತ್ತಿದೆಯೇ? ಗೊತ್ತಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರ್ಕಾರ ಬುಧವಾರ(ಮಾ.28) ಹೊರಡಿಸಿರುವ ಸುತ್ತೋಲೆ ಪ್ರಕಾರ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಇಂಗ್ಲೀಷ್ ದಿನಪತ್ರಿಕೆ ಇರಿಸುವಂತಿಲ್ಲ. ಸರ್ಕಾರ ಸೂಚಿಸಿದ 8 ಪತ್ರಿಕೆಗಳು ಮಾತ್ರ ಲಭ್ಯವಿರುವಂತೆ ಮಾಡಿ ಎನ್ನಲಾಗಿದೆ.

ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ದಿ ಟೆಲಿಗ್ರಾಫ್, ಸ್ಟೇಟ್ಸ್ ಮನ್ ಮುಂತಾದ ಪ್ರಮುಖ ದಿನಪತ್ರಿಕೆಗಳು ತೃಣಮೂಲ ಕಾಂಗ್ರೆಸ್ ಹೊರಡಿಸಿರುವ ಸುತ್ತೋಲೆಯ ಪಟ್ಟಿಯಲ್ಲಿಲ್ಲ. ಸರ್ಕಾರದ ಸುತ್ತೋಲೆಗೆ ಈಗಾಗಲೇ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆನಂದ್ ಬಜಾರ್ ಪತ್ರಿಕಾ ಎಂಬ ಜನಪ್ರಿಯ ಬೆಂಗಾಳಿ ಪತ್ರಿಕೆ ಕೂಡಾ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಂಚಿತವಾಗಿದೆ.

ಬೆಂಗಾಳಿ ಭಾಷೆ ಅಭಿವೃದ್ಧಿಗೆ, ಪ್ರಚಾರಕ್ಕೆ ಸರ್ಕಾರ ಸೂಚಿಸಿದ ಪತ್ರಿಕೆಗಳು ಅವಶ್ಯಕ. ಗ್ರಾಮೀಣ ಭಾಗದಲ್ಲಿ ಜನರು ಮುಕ್ತವಾಗಿ ಚಿಂತಿಸಲು ಪ್ರಾದೇಶಿಕ ಭಾಷೆ ಪತ್ರಿಕೆಗಳು ಸಾಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಇಂಗ್ಲೀಷ್ ಪತ್ರಿಕೆಗಳಿಗೆ ಕೋಕ್ ನೀಡಿರುವ ಮಮತಾ ಅವರು ಕೆಲವು ಹಿಂದಿ ಹಾಗೂ ಉರ್ದು ಪತ್ರಿಕೆಗಳಿಗೆ ಸ್ಥಾನ ಕಲ್ಪಿಸಿರುವುದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+