ಕುಂದಾಪುರದ ವಿಶಿಷ್ಟ ಕುಂದಾಪ್ರ. ಕಾಮ್ ಬಿಡುಗಡೆ

Kundrapa.com Website Launch
ಕುಂದಾಪುರ, ಮಾ.27: ಇಲ್ಲಿನ ಭಂಡಾರಕಾರ್ಸ್ ಕಾಲೇಜಿನ ಕುಂದಾಪುರದ ವಿಶಿಷ್ಟ ವೆಬ್ ತಾಣ ಕುಂದಾಪ್ರ.ಕಾಮ್ (www.kundapra.com) ಮಾರ್ಚ್ 31, 2011ರ ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾ ಭವನದಲ್ಲಿ ಬಿಡುಗಡೆಗೊಳ್ಳಲಿದೆ. ಕಾಲೇಜಿನ ತೃತೀಯ ಬಿಬಿಎಂ ವಿದ್ಯಾರ್ಥಿ ಸುನಿಲ್ ಹೆಚ್. ಜಿ ಇವರು ವೆಬ್ ಸೈಟ್ ಅನ್ನು ರೂಪಿಸಿದ್ದಾರೆ.

ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ. ಹೆಚ್ ಶಾಂತಾರಾಮ್ ವೆಬ್‌ಸೈಟ್ ಬಿಡುಗಡೆಗೊಳಿಸುವರು. ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ದೋಮ ಅಧ್ಯಕ್ಷತೆ ವಹಿಸುವರು.

ಉಡುಪಿ ಜಿಲ್ಲಾ ಕ.ಸಾ.ಪ ನಿಕಟಪೂರ್ವಾಧ್ಯಕ್ಷ, ಪತ್ರಕರ್ತ ಎ.ಎಸ್.ಎನ್ ಹೆಬ್ಬಾರ್, ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಓಂ ಗಣೇಶ್ ಅತಿಥಿಗಳಾಗಿ ಉಪಸ್ಥಿತರಿರುವರು.

ಏನಿದೆ ಇ-ಪತ್ರಿಕೆಯಲ್ಲಿ?: ವಿದ್ಯಾರ್ಥಿ ಬರಹಗಳು, ಕುಂದಾಪ್ರದ ಸುದ್ದಿ, ವಿವಿಧ ಲೇಖನಗಳು, ಮಾಹಿತಿ ಮಾತ್ರವಲ್ಲದೇ ಸುದ್ದಿ ಪತ್ರಿಕೆಗಳು, ನಾಡು-ನುಡಿಗೆ ಸಂಬಂಧಿಸಿದ ಹಲವು ವಿಚಾರಗಳು, ಸಂಗೀತ, ತಂತ್ರಾಂಶ, ವೀಡಿಯೋ ತುಣುಕು ಇತ್ಯಾದಿಗಳಿಗ ಸಂಬಂಧಿಸಿದ ಲಿಂಕ ಒಳಗೊಂಡಿದೆ. ಓಟ್ಟಿನಲ್ಲಿ ಓದುಗನೊಬ್ಬನಿಗೆ ಅವಶ್ಯವೆನಿಸುವ ಹಲವು ಮಾಹಿತಿಗಳನ್ನು ಒಳಗೊಂಡಿದೆ.

ಉಡುಪಿ ಜಿಲ್ಲೆಯ ಕುಂದಾಪುರ: ಇತರೆಲ್ಲಾ ಭಾಗಗಳಿಗಿಂತ ವಿಭಿನ್ನವಾದ ಸಂಸ್ಕೃತಿಯನ್ನು ಹೊಂದಿರುವ ಪ್ರದೇಶ. ಅಚ್ಚಗನ್ನಡದ ಕುಂದಾಪುರ ಭಾಷೆ ನಾಡಿನಲ್ಲಿಯೇ ವಿಶಿಷ್ಟವಾದದ್ದು.

ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ರಾಜಕೀಯ ರಂಗಕ್ಕೆ ಹಲವಾರು ಧೀಮಂತರನ್ನು ಪರಿಚಯಿಸಿದ ಕಿರುತಿ ಇಲ್ಲಿನದು. ಪಂಚಗಂಗಾವಳಿ, ಮರವಂತೆ, ಒತ್ತಿನಣೆ, ಕೊಡಚಾದ್ರಿ ಮುಂತಾದ ಸ್ಥಳಗಳು ಇಲ್ಲಿನ ನಿಸರ್ಗ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದರೆ, ಧಾರ್ಮಿಕ ಕ್ಷೇತ್ರಗಳು ಅನನ್ಯತೆಯ ದ್ಯೋತಕಗಳಾಗಿ ಉಳಿದಿವೆ.

ಕುಂದಾಪ್ರ ಭಾಷಾ ಸೊಗಡು, ವಿಭಿನ್ನ ಸಂಸ್ಕೃತಿ, ವರ್ತಮಾನದ ಸುದ್ದಿ ಮುಂತಾದವುಗಳ ಮೂಲಕ ಕುಂದಾಪುರದ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ಜೊತೆಗೆ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಪ್ರಯತ್ನದ ಮೊದಲ ಹೆಜ್ಜೆ- ಕುಂದಾಪ್ರ.ಕಾಮ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+