ಯಡ್ಡಿ ಮಾಡಿದ್ದ ಅಕ್ರಮ ಸರಿತಿದ್ದಿದ ಸದಾನಂದ!

ಆದರೂ ಇಲ್ಲಿ ಕಾಡುತ್ತಿರುವ ಪ್ರಶ್ನೆ ಏನೆಂದರೆ ನಿಕೃಷ್ಟ ಕಳ್ಳನೊಬ್ಬ ತಾನು ಕದ್ದ ಮಾಲನ್ನು ವಾಪಸ್ ಮಾಡಿದರೆ ಯಾವುದೇ ಶಿಕ್ಷೆಯೇ ಇಲ್ಲದೆ ಅವನನ್ನು ಆರೋಪ ಮುಕ್ತಗೊಳಿಸುವುದು ಯಾವ ನ್ಯಾಯ? ನೀವೇನಂತೀರಿ !?
ಏನಾಗಿತ್ತೆಂದರೆ ನಂದಿನಿ ಲೇಔಟ್ ಜರಕಬಂಡೆಯಲ್ಲಿ ಬೆನಕ ಇಂಗ್ಲೀಷ್ ಶಾಲೆ ಎಂಬ ಬೇನಾಮಿ ಸಂಸ್ಥೆಗೆ 2010 ಜನವರಿಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ್ದರು. ಅದನ್ನೀಗ ಸರ್ಕಾರ ಹಿಂಪಡೆದಿದೆ.
ಪ್ರಕರಣದ ಸಂಬಂಧ ಶಾಸಕ ನೆ.ಲ. ನರೇಂದ್ರ ಬಾಬು ಅವರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ರಸ್ತೆಗೆ ಮೀಸಲಿಟ್ಟಿದ್ದ ಜಾಗವನ್ನು ಮಾಜಿ ಸಿಎಂ ಯಡಿಯೂರಪ್ಪ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ.ನಷ್ಟವಾಗಿದೆ ಎಂದು ಬಾಬು ಆರೋಪಿಸಿದ್ದರು.
ಮುಖ್ಯ ನ್ಯಾಯಮೂರ್ತಿ ವಿ.ಜೆ. ಸೇನ್ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿತ್ತು. ವಿಚಾರಣೆ ಸಂದರ್ಭಕ್ಕೆ ಫೆ. 8ರಂದು ಡಿನೋಟಿಫಿಕೇಷನ್ ಆದೇಶ ಹಿಂಪಡೆದಿರುವುದಾಗಿ ಸದಾನಂದರ ಸರ್ಕಾರ ಕೂಲಾಗಿ ಪ್ರಮಾಣ ಪತ್ರ ಸಲ್ಲಿಸಿತು. ಈ ಪ್ರಮಾಣ ಪತ್ರ ಆಧರಿಸಿದ ಹೈಕೋರ್ಟ್ ಬಾಬು ಅರ್ಜಿ ವಜಾಗೊಳಿಸಿ, ಪ್ರಕರಣಕ್ಕೆ ಇತಿಶ್ರೀ ಹಾಡಿತು. ಜನ ಧನ್ಯೋಸ್ಮಿ ಅಂದರು.












Click it and Unblock the Notifications