ಸಂಸದ ರಾಜೀವ್ ಸೇರಿ ರಾಜ್ಯಸಭೆಗೆ ನಾಲ್ವರು ಆಯ್ಕೆ

Rajeev Chandrashekar
ಬೆಂಗಳೂರು, ಮಾ.24: ಉದ್ಯಮಿ, ಪಕ್ಷೇತರ ಅಭ್ಯರ್ಥಿ ರಾಜೀವ್ ಚಂದ್ರಶೇಖರ್, ಬಿಜೆಪಿಯ ಬಸವರಾಜ ಸೇಡಂ, ಆರ್ ರಾಮಕೃಷ್ಣ ಹಾಗೂ ಕಾಂಗ್ರೆಸ್ ನ ಕೆ ರೆಹಮಾನ್ ಖಾನ್ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಪಿ ಓಂಪ್ರಕಾಶ್ ಪ್ರಕಟಿಸಿದ್ದಾರೆ.

ಬಿಜೆಪಿ ಹೈಕಮಾಂಡ್ ಗೆ ಸೆಡ್ದು ಹೊಡೆಯಲು ಹೋಗಿ ಮುಖಭಂಗ ಅನುಭವಿಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ ಬಿಜೆ ಪುಟ್ಟಸ್ವಾಮಿ, ನಾಮಪತ್ರ ಹಿಂಪಡೆದಿದ್ದಾರೆ.

ನಾಲ್ಕು ಜನರ ಪೈಕಿ ರೆಹಮಾನ್‌ಖಾನ್ ಮತ್ತು ರಾಜೀವ್ ಚಂದ್ರಶೇಖರ್ ಪುನರಾಯ್ಕೆಯಾಗಿದ್ದಾರೆ. ಖಾನ್ ಅವರು ನಾಲ್ಕನೇ ಬಾರಿಗೆ ಹಾಗೂ ರಾಜೀವ್ ಅವರು 2ನೇ ಅವಧಿಗೆ ರಾಜ್ಯಸಭೆ ಪ್ರವೇಶಿಸುತ್ತಿದ್ದಾರೆ. ಇವರ ಅಧಿಕಾರ ಅವಧಿ ಏಪ್ರಿಲ್ 2ರಿಂದ 6 ವರ್ಷಗಳ ಕಾಲ ಇರುತ್ತದೆ.

ಆಯ್ಕೆ ಕುರಿತ ಪ್ರಮಾಣ ಪತ್ರ ಸ್ವೀಕರಿಸಿ ಸುದ್ದಿಗಾರರ ಜತೆ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿಯೂ ಆದ ತಮಿಳುನಾಡು ಮೂಲದ ಆರ್.ರಾಮಕೃಷ್ಣ ಅವರು 'ಇನ್ನು ಮುಂದೆ ಕರ್ನಾಟಕ ನನ್ನ ಎರಡನೇ ಮನೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+