ಸರಕಾರಿ ನೌಕರರಿಗೆ ಸದಾನಂದ ಯುಗಾದಿ ಗಿಫ್ಟ್

karnataka-budget-dvs-6-pay-commission-accepted
ಬೆಂಗಳೂರು,ಮಾ. 21: ಬುಧವಾರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ತಮ್ಮ ಉದ್ಯೋಗಿಗಳಿಗೆ ಯುಗಾದಿಗೂ ಮುನ್ನವೇ ಭರ್ಜರಿ ಹೋಳಿಗೆಯನ್ನು ಉಣಬಡಿಸಿದ್ದಾರೆ. ಪಿಂಚಣಿದಾರರಿಗೂ ಇದು ಅನ್ವಯವಾಗಲಿದೆ. ಇದೇ ವೇಳೆ ಮುಖ್ಯಮಂತ್ರಿಗಳು ದಿನಗೂಲಿ ನೌಕರರ ಸಂಭಾವನೆವನ್ನು ಪ್ರತಿ ತಿಂಗಳಿಗೆ ಸಾವಿರ ರೂ. ಹೆಚ್ಚಳಗೊಳಿಸಿದ್ದಾರೆ.

6ನೇ ವೇತನ ಆಯೋಗದ ಶಿಫಾರಸುಗಳನ್ನು ಚಾಚೂ ತಪ್ಪದೆ ಜಾರಿಗೊಳಿಸುವುದಾಗಿಯೂ, ಅದಕ್ಕಾಗಿ ಬಜೆಟಿನಲ್ಲಿ 4,450 ಕೋಟಿ ರು. ಅನುದಾನ ತೆಗೆದಿರಿಸುವುದಾಗಿಯೂ ಸದಾನಂದರು ಪ್ರಕಟಿಸಿದರು. ಇದರಿಂದ ಲಕ್ಷಾಂತರ ಸರ್ಕಾರಿ ನೌಕರರ ಮೊಗದಲ್ಲಿ ಅದಾಗಲೇ ಮಂದಹಾಸ ಮೂಡಿದೆ. 2011ರ ನವೆಂಬರಿನಿಂದ ಪೂರ್ನಾನ್ವಯವಾಗುವಂತೆ ಏಪ್ರಿಲ್ 1ರಿಂದ ಬಾಕಿ ಸಮೇತ ಪರಿಷ್ಕೃತ ವೇತನ ನೀಡಲಾಗುವುದು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭೀರ್‌ಹರಿಸಿಂಗ್‌ ನೇತೃತ್ವದ ವೇತನ ಸಮಿತಿಯು ಮೊನ್ನೆ ಸೋಮವಾರ ರಾತ್ರಿ 10 ಗಂಟೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಗೌಪ್ಯ ವರದಿ ಸಲ್ಲಿಸಿತ್ತು. ರಾಜ್ಯದಲ್ಲಿ, ಆರು ಲಕ್ಷ ಸರ್ಕಾರಿ ನೌಕರರು, ಎರಡು ಲಕ್ಷ ನಿವೃತ್ತ ನೌಕರರು, ವಿಶ್ವವಿದ್ಯಾಲಯ ಬೋಧಕರು, ನಿಗಮ- ಮಂಡಳಿ ಹಾಗೂ ಸ್ಥಳೀಯ ಸಂಸ್ಥೆ ನೌಕರರು ಸೇರಿದಂತೆ ಎಂಟೂವರೆ ಲಕ್ಷ ಮಂದಿ ಇರುವ ದೊಡ್ಡ ಸಮೂಹ ಇದಾಗಿದೆ.

6ನೇ ವೇತನ ಆಯೋಗದ ಮುಖ್ಯ ಶಿಫಾರಸ್ಸುಗಳು ಹೀಗಿವೆ:
1. ಶೇ.25 ವೇತನ ಹೆಚ್ಚಳ, ವಾರಕ್ಕೆ ಐದೇ ದಿನ ಕೆಲಸ
2. ಮೂಲವೇತನದಲ್ಲಿ ತುಟ್ಟಿ ಭತ್ಯೆ ವಿಲೀನ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹೆಚ್ಚಳ
3. ಈಗಿರುವ ಕನಿಷ್ಠ ಮೂಲವೇತನ 4800 ರೂ. ಅನ್ನು 9800 ರೂ. ಗೆ ಏರಿಸುವುದು
4. ಮೂಲವೇತನಕ್ಕೆ ಶೇ. 70 ರಷ್ಟು ತುಟ್ಟಿಭತ್ಯೆ ಸೇರಿಸುವುದು.
5. ನಗರ ಭತ್ಯೆಯನ್ನು 300 ರಿಂದ 600 ರೂ.ವರೆಗೆ 6. ಮನೆ ಬಾಡಿಗೆ ಭತ್ಯೆ ಶೇ.5 ರಷ್ಟು ಹೆಚ್ಚಳ
6. ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ಹೆರಿಗೆ ರಜೆ ನೀಡುವುದು
7. ಗಳಿಕೆ ರಜೆಯನ್ನು 240 ದಿನದಿಂದ 300ಕ್ಕೆ ಹೆಚ್ಚಳ ಮಾಡುವುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+