ಯಡ್ಡಿಗೆ ಸದ್ಯಕ್ಕೆ ಸೋಲು; ಸದಾನಂದರಿಂದಲೇ ಬಜೆಟ್
ಬೆಂಗಳೂರು,
ಮಾ.20: ಬಿಜೆಪಿ ಹೈಕಮಾಂಡ್ ತನ್ನ ಅಚಲ ನಿಲುವಿಗೆ ಅಂಟಿಕೊಂಡಿದ್ದು, ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 'ಮುಖ್ಯಮಂತ್ರಿ ಸದಾನಂದಗೌಡರೇ ಬಜೆಟ್ ಮಂಡಿಸುತ್ತಾರೆ' ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಮಂಗಳವಾರ ಬೆಳಗ್ಗೆ ಸ್ಪಷ್ಟಪಡಿಸಿದ್ದಾರೆ. id="toptextpromo">ಇದರಿಂದ
ಸದ್ಯಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಮೊದಲ ಸೋಲುಂಟಾಗಿದೆ. ಇದೇ ವೇಳೆ, ಬಿಜೆಪಿ ಹೈಕಮಾಂಡಿನ ನಿರ್ಧಾರಕ್ಕೆ ಮಣಿದಿರುವ ಯಡಿಯೂರಪ್ಪ ಬಣ ತಕ್ಷಣ ಗೋಲ್ಡನ್ ಪಾಮ್ ರೆಸಾರ್ಟ್ ಬಿಟ್ಟು, ವಿಎಸ್ ಆಚಾರ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲು ವಿಧಾನೌಧದತ್ತ ದೌಡಾಯಿಸುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮೊದಲು
ಬಜೆಟ್ ಮಂಡನೆಯಾಗಲಿ. ಅದಾದ ತಕ್ಷಣ ಅಧಿವೇಶನ ಮುಗಿಯುತ್ತಿದ್ದಂತೆ ತಮ್ಮ ಬಣದ ಬೇಡಿಕೆಯನ್ನು ಪರಿಶೀಲಿಸುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಸಮ್ಮತಿಸಿದ್ದಾರೆ' ಎಂದು ಬಸವರಾಜ್ ಬೊಮ್ಮಾಯಿ ರೆಸಾರ್ಟಿನಲ್ಲಿ ಕೆಲವೇ ಕ್ಷಣಗಳ ಹಿಂದೆ ಸುದ್ದಿಗಾರರಿಗೆ ತಿಳಿಸಿದ್ದಾರೆ.











Click it and Unblock the Notifications