ಬರ್ತ್‌ಡೇ ಬಾಯ್ ಗೆ ಯಡಿಯೂರಪ್ಪ ಗಿಫ್ಟ್ ಏನಿರಬಹುದು?

what-could-be-birthday-gift-to-dvs-from-bsy
ಬೆಂಗಳೂರು, ಮಾ.18: ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರಿಗೆ ಇಂದು (ಮಾ.18) 59ನೇ ಹುಟ್ಟುಹಬ್ಬ. ಬೆಳ್ಳಂಬೆಳಗ್ಗೆ ತುಮಕೂರಿಗೆ ತೆರಳಿದ ಅವರು ಸಿದ್ದಗಂಗಾ ಕ್ಷೇತ್ರದ ಶತಾಯುಷಿ ಡಾ. ಶಿವಕುಮಾರಸ್ವಾಮಿಗಳ ಆಶೀರ್ವಾದ ಪಡೆದರು.

ಶಾಸಕ ಸೊಗಡು ಶಿವಣ್ಣ, ಸುರೇಶ್ ಗೌಡ, ಸಚಿವ ಯೋಗೀಶ್ವರ್ ಸದಾನಂದಗೌಡರಿಗೆ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಸದಾನಂದರು ಇದೇ ಬುಧವಾರ ಪೂರ್ವನಿಗದಿಯಂತೆ ತಾವೇ ಬಜೆಟ್ ಮಂಡಿಸುವುದಾಗಿ ಪುನರುಚ್ಚರಿಸಿದರು.

ತುಮಕೂರಿನಿಂದ ರಾಜಧಾನಿಗೆ ವಾಪಸಾದ ಮುಖ್ಯಮಂತ್ರಿ ಸದಾನಂದರು ಬಸವನಗುಡಿಯಲ್ಲಿರುವ ಶಂಕರಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಅದಕ್ಕೂ ಮುನ್ನ ವಿಜಯನಗರದಲ್ಲಿರುವ ಶ್ರೀ ಆದಿಚುಂಚುನಗಿರಿ ಮಠಕ್ಕೆ ಭೇಟಿ ನೀಡಿ, ಬಾಲಗಂಗಾಧರನಾಥ ಸ್ವಾಮಿಗಳಿಂದ ಆಶೀರ್ವಾದ ಪಡೆದರು. ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿರುವ ಸದಾನಂದಗೌಡರು ಇಂದು ಮತ್ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಬೆಂಬಲಿಗರೊಂದಿಗೆ ಎಗರಾಡುತ್ತಿರುವ ಯಡಿಯೂರಪ್ಪ: ಆದರೆ ಸದಾನಂದಗೌಡರಿಗೆ ಇಂದಿನ 59ನೇ ಹುಟ್ಟುಹಬ್ಬ ಅನೇಕ ರೀತಿಯಲ್ಲಿ ಮಹತ್ವದ್ದಾಗಿದೆ. ಅತ್ತ ತಾವು ಪ್ರತಿನಿಧಿಸುತ್ತಿದ್ದ ಸಂಸತ್ ಕ್ಷೇತ್ರದಲ್ಲಿ ಇಂದು ಮತದಾನ ಆರಂಭವಾಗಿದೆ. ತಮ್ಮ ಪಕ್ಷವೇ ಸ್ಥಾನವನ್ನು ಉಳಿಸಿಕೊಳ್ಳುವುದು ಗೌಡರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಅದಕ್ಕಿಂತ ಮುಖ್ಯವಾಗಿ, ಈ ಬಾರಿಯ ಮಹತ್ವದ ಬಜೆಟ್ ಅನ್ನು ಮಂಡಿಸಲು ಬೆಂಬಲಿಗರೊಂದಿಗೆ ಎಗರಾಡುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದಾನಂದಗೌಡರಿಗೆ ಏನು ಬರ್ತ್‌ ಡೇ ಗಿಫ್ಟ್ ಕೊಡಬಹುದು ಎಂಬುದರತ್ತ ಎಲ್ಲರೂ ಕುತೂಹಲಭರಿತರಾಗಿದ್ದಾರೆ.

ಏಕೆಂದರೆ ಯಡಿಯೂರಪ್ಪ ಇಂದು ಸಂಜೆ ಸದಾನಂದರ ವಿರುದ್ಧ ನಿರ್ಣಾಯಕ ಯುದ್ಧ ಸಾರುವ ಎಲ್ಲ ಲಕ್ಷಣಗಳೂ ಕಣ್ಣಿಗೆ ರಾಚುತ್ತಿವೆ. Any way, our 'oneindia kannada' News Portal wish you many many happy returns of the day, CM sir!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+