ಶಿರಸಿ ಶುಭಾ ಸೂಸೈಡ್ ಗೆ ಯಾರು ಟಾರ್ಗೆಟ್?

ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮತ್ತಿಕೆರೆ 6 ನೇ ಕ್ರಾಸ್ ನಲ್ಲಿರುವ ಮನೆಯಲ್ಲಿ 25 ವರ್ಷದ ಯುವತಿ ಶುಭಾ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ಟಾರ್ಗೆಟ್ ಎನ್ನುವ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಶುಭಾ ಡೆತ್ ನೋಟ್ ಬರೆದಿಟ್ಟಿದ್ದಾರೆ. 'ನನ್ನ ಸಾವಿಗೆ ನಾನೇ ಕಾರಣ. ನನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು' ಎಂದು ಪತ್ರದಲ್ಲಿ ಹೇಳಲಾಗಿದೆ.
ಮತ್ತಿಕೆರೆಯಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿ ವಾಸಿಸುತ್ತಿದ್ದ ಶುಭಾ ಸಾವನ್ನಪ್ಪಿ 2 ದಿನ ಕಳೆದಿರಬಹುದು ಎಂದು ಶಂಕಿಸಲಾಗಿದೆ. ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಸಂಶಯ ಮೂಡಿದೆ. ಶುಭಾ ಆಫೀಸ್ ಗೆ ಹೋಗಿರಬಹುದು ಎಂದು ಮನೆ ಮಾಲೀಕರು ಕೂಡಾ ಸುಮ್ಮನ್ನಿದ್ದುಬಿಟ್ಟಿದ್ದಾರೆ.
ಅದರೆ, ಭಾನುವಾರ(ಮಾ.18) ಶುಭಾ ಇದ್ದ ಬಾಡಿಗೆ ಮನೆಯಿಂದ ಕೆಟ್ಟವಾಸನೆ ಬರಲಾರಂಭಿಸಿದ್ದರಿಂದ ಮನೆ ಕಿಟಕಿ ತೆಗೆದು ನೋಡಿದಾಗ ಶುಭಾ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ.
ಘಟನೆ ಸ್ಥಳಕ್ಕೆ ಯಶವಂತಪುರ ಠಾಣೆ ಇನ್ಸ್ ಪೆಕ್ಟರ್ ಪುರುಷೋತ್ತಮ್, ಡಿಸಿಪಿ ರೇವಣ್ಣ ಅವರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.












Click it and Unblock the Notifications