ರೆಡ್ಡಿ ಇಂದಿನಿಂದ ಪರಪ್ಪನ ಅಗ್ರಹಾರ ಜೈಲುವಾಸಿ

15 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿರುವ ರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು ಅನಿವಾರ್ಯವಾಗಿದೆ. ಆದ್ದರಿಂದ, ತಕ್ಷಣ ರೆಡ್ಡಿಯನ್ನು ಅಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗುವುದು. ಜತೆಗೆ ರೆಡ್ಡಿಗೆ ವಿಚಾರಣಾಧೀನ ಕೈದಿ ಸಂಖ್ಯೆಯೂ ಪ್ರಾಪ್ತಿಯಾಗಲಿದೆ.
ಅಂದಹಾಗೆ ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿ ರೆಡ್ಡಿ ಈಗಾಗಲೇ ಕೈದಿ ನಂಬರ್ 697 ಧರಿಸಿರುವುದರಿಂದ ಅಲ್ಲಿನ ಸಿಬಿಐ ಅಧಿಕಾರಿಗಳು ಯಾವುದೇ ಕ್ಷಣ ಬಂದು 'ರೆಡ್ಡಿಗೆ ಬೆಂಗಳೂರು ಸಿಬಿಐ ಕಸ್ಟಡಿ ಮುಗಿದಿde. ಆದ್ದರಿಂದ ಆತನನ್ನು ನಾವು ವಾಪಸ್ ಕರೆದುಕೊಂಡು ಹೋಗುತ್ತೇವೆ' ಎಂದು ತಿಳಿಸಿದರೆ ರೆಡ್ಡಿಗೆ ಆಗ ಹೈದರಾಬಾದಿನತ್ತ ತೆರಳುವುದು ಅನಿವಾರ್ಯ. ಅಲ್ಲಿಗೆ ರೆಡ್ಡಿಗೆ ತಮ್ಮ ನೆಚ್ಚಿನ ತವರು ರಾಜ್ಯದ ಜೈಲು ಭಾಗ್ಯ ಅಲ್ಪಾವಧಿಯದ್ದಾಗಲಿದೆ.
ಇನ್ನು, ಬೆಂಗಳೂರು ಸಿಬಿಐ ಅಧಿಕಾರಿಗಳು ರೆಡ್ಡಿ ಆಪ್ತ ಸಹಾಯಕ ಅಲಿಖಾನ್ ಇನ್ನೂ ನಾಲ್ಕು ದಿನ ತಮ್ಮ ವಶದಲ್ಲಿರಲಿ ಎಂದು ಕೋರಿದರೆ ಕೋರ್ಟ್ ಅದಕ್ಕೆ ತಥಾಸ್ತು ಅನ್ನಬಹುದು. ಏಕೆಂದರೆ ಅಲಿಖಾನ್ ಮಾರ್ಚ್ 2 ರಂದು ಕೋರ್ಟಿಗೆ ಶರಣಾದಾಗ ಆತನನ್ನು ನಾಲ್ಕು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಲಾಗಿತ್ತು.












Click it and Unblock the Notifications