ಭವಿಷ್ಯ ನಿಧಿ ಬಡ್ಡಿ ದರಕ್ಕೆ ಬರೆ: 8.25ಕ್ಕೆ ಇಳಿಕೆ

ಬಡ್ಡಿ ದರಗಳನ್ನು 2010-11ನೇ ಸಾಲಿಗಾಗಿ ಶೇ. 8.25ಕ್ಕೆ ಕುಗ್ಗಿಸಿದ್ದಾರೆ. ಇದರ ಹಿಂದಿನ ವರ್ಷದಲ್ಲಿ ಈ ಬಡ್ಡಿದರ ಶೇ. 9.5 ರಷ್ಟಿತ್ತು. ಇದರಿಂದ ಕೇಂದ್ರ ಸರಕಾರ ನೌಕರ ಸಮುದಾಯವನ್ನು ನಿರಾಶೆಯ ಮಡುವಿಗೆ ತಳ್ಳಿದೆ.
ಬುಧವಾರ ಸಂಜೆ ಈ ಆದೇಶಕ್ಕೆ ಕೇಂದ್ರ ಸರಕಾರದ ಅಧಿಕೃತ ಮುದ್ರೆ ಬಿದ್ದಿದ್ದು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಈ ಬಗ್ಗೆ ಮಾಹಿತಿ ರವಾನಿಸಿದೆ ಎಂದು EPFO ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರಿನಲ್ಲಿ EPFO ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುವಂತೆ ಸಲಹೆ ನೀಡಿತ್ತಾದರೂ ಅಂತಿಮ ನಿರ್ಧಾರವನ್ನು ಹಣಕಾಸು ಸಚಿವಾಲಯಕ್ಕೆ ಬಿಟ್ಟಿತ್ತು. ಆದರೆ ಪಂಚ ರಾಜ್ಯಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಡಿಮೆ ಬಡ್ಡಿದರ ನಿಗದಿ ಸರಕಾರ ಹಿಂದೇಟು ಹಾಕಿತ್ತು. ಶೇ. 8.25ರ ಬಡ್ಡಿ ದರವನ್ನು ನಿಗದಿಪಡಿಸುವುದರಿಂದ ಹೆಚ್ಚಿನ ಕೊರತೆ ಬೀಳುವುದಿಲ್ಲ ಎಂದು EPFO ಹೇಳಿದೆ.












Click it and Unblock the Notifications