ಯಡ್ಡಿ ಸಮಾವೇಶಕ್ಕೆ ಜಾರಕಿಹೊಳಿ 'ಉತ್ತರ' ಸಭೆ
ಹುಬ್ಬಳ್ಳಿ,
ಮಾ.12: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟುಹಬ್ಬ ನಿಮಿತ್ತ ನಡೆದ ಅಭಿನಂದನಾ ಸಮಾವೇಶಕ್ಕೆ ಉತ್ತರವಾಗಿ ಸಚಿವ ಬಾಲಚಂದ್ರ ಜಾರಕಿಹೊಳಿ ಉತ್ತರ ಕರ್ನಾಟಕದಲ್ಲಿ ಮತ್ತೊಂದು ಸಭೆ ನಡೆಸುವ ಲಕ್ಷಣಗಳಿವೆ. ಇದಕ್ಕೆ ಪೂರ್ವಭಾವಿಯಾಗಿ ಇದೇ 14ರಂದು ವಿಜಾಪುರದಲ್ಲಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ ಎನ್ನಲಾಗಿದೆ. id="toptextpromo">ಮುಖ್ಯಮಂತ್ರಿ
ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ಬೆಂಬಲಿಗರು ಅವರಿಬ್ಬರಿಗೂ ಅಭಿನಂದನೆಯ ರೂಪದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲು ಮುಂದಾಗಿದ್ದಾರೆ. ಪಕ್ಷದಲ್ಲಿ ಇದು ಇಬ್ಬಣಗಳ ನೇರ ಶಕ್ತಿ ಪ್ರದರ್ಶನಕ್ಕೆ ಕಾರಣ ಆಗುವ ಸಾಧ್ಯತೆ ಇದೆ. ಬಜೆಟ್ ಮಂಡನೆ ನಂತರ ವಿಜಾಪುರ ಅಥವಾ ಬಾಗಲಕೋಟೆಯಲ್ಲಿ ಶಕ್ತಿ ಪ್ರದರ್ಶನ ನಡೆಸಲು ಮುಖ್ಯಮಂತ್ರಿ ಬೆಂಬಲಿಗರು ನಿರ್ಧರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹಿಂದುಳಿದ
ಮತ್ತು ದಲಿತ ವರ್ಗಗಳ ವಿವಿಧ ಸ್ವಾಮೀಜಿಗಳು ಶನಿವಾರ (ಮಾರ್ಚ್ 10) ಮುಖ್ಯಮಂತ್ರಿ ಸದಾನಂದ ಗೌಡರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಈ ಬೇಡಿಕೆ ಈಡೇರುವ ಸಾಧ್ಯತೆಯಿವೆ. ಇದನ್ನೇ ನೆಪ ಮಾಡಿಕೊಂಡು ಬಜೆಟ್ ನಂತರ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲು ಸ್ವಾಮೀಜಿಗಳು, ಹಿಂದುಳಿದ ವರ್ಗಗಳ ಮುಖಂಡರು ನಿರ್ಧರಿಸಿದ್ದಾರೆ. ಪ.ಜಾತಿ, ಪಂಗಡ, ಮುಸ್ಲಿಂ, ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಸಮುದಾಯದವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.











Click it and Unblock the Notifications