ಪಟ್ಟ ಸಿಕ್ಕಿಲ್ಲ ಎಂದು ಪಕ್ಷ ಬಿಡುವುದಿಲ್ಲ: ಬಿಎಸ್ ವೈ

BS Yeddyurappa
ಹುಬ್ಬಳ್ಳಿ, ಮಾ.12: ಅಭಿನಂದನಾ ಸಮಾವೇಶ ಮುಗಿದ ತಕ್ಷಣ ಸಚಿವ ಜಗದೀಶ ಶೆಟ್ಟರ ಮನೆಗೆ ತೆರಳಿದ ಯಡಿಯೂರಪ್ಪನವರು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹಾಗೂ ಕೃಷಿ ಸಚಿವ ಉಮೇಶ ಕತ್ತಿ ಜೊತೆ ಇತರೆ ಬೆಂಬಲಿಗರನ್ನು ಕೂರಿಸಿಕೊಂಡು ಗುಪ್ತ ಸಭೆ ನಡೆಸಿದ್ದಾರೆ.

ಹೈಕಮಾಂಡ್ ಕೊಟ್ಟ ಆಫರ್ ಗಳನ್ನು ಧಿಕ್ಕರಿಸಿರುವ ಯಡಿಯೂರಪ್ಪ ಅವರ ಮುಂದಿನ ನಡೆ ಬಗ್ಗೆ ಅವರ ಬೆಂಬಲಿಗರಲ್ಲೇ ಗೊಂದಲವಿದೆ. ಅಷ್ಟು ನಾಜೂಕಾಗಿ ಯಡಿಯೂರಪ್ಪ ಹೆಜ್ಜೆ ಇಡುತ್ತಿದ್ದಾರೆ.

ಅದೇ ರೀತಿ 40 ವರ್ಷಗಳ ರಾಜಕೀಯ ಅನುಭವದಲ್ಲಿ ತನಗೆ ರಾಜಕೀಯ ಷಡ್ಯಂತ್ರದ ಚಕ್ರವ್ಯೂಹವನ್ನು ಭೇದಿಸುವುದು ಗೊತ್ತು, ಅದರಿಂದ ಹೊರ ಬರುವುದೂ ಗೊತ್ತು ಎಂದು ಹೇಳುವ ಮೂಲಕ ತಮ್ಮ ವಿರೋಧಿಗಳಿಗೆ ಚಾಟಿಬೀಸಿದರು.

ಜಾತಿ ನೋಡಿ ರಾಜಕೀಯ ಮಾಡಲ್ಲ: ಬಿಜೆಪಿ ಕಟ್ಟಿ ಬೆಳೆಸಿದ್ದರಿಂದ ತಾನು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ. ಇಂದಿನಿಂದಲೇ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಕಲ್ಪ ಮಾಡಿದ್ದೇನೆ ಎಂದರು.

ಮುಖ್ಯಮಂತ್ರಿಗಿಂತಲೂ 10 ಪಟ್ಟು ಹೆಚ್ಚು ರಾಜ್ಯದ ಅಭಿವೃದ್ಧಿ ಕಡೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ 150 ವಿಧಾನಸಭಾ ಸ್ಥಾನವನ್ನು 23 ಲೋಕಸಭಾ ಸ್ಥಾನವನ್ನು ನನ್ನ ಗುರಿ. 175 ತಾಲೂಕುಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ .

ನನ್ನ ಆಟ ನೋಡಿ : ರಕ್ಷಣಾತ್ಮಕ ಆಟವೂ ಗೊತ್ತು, ಆಕ್ರಮಣಕಾರಿ ಆಟವೂ ಗೊತ್ತು. ವಿಪಕ್ಷದವರ ಕುತಂತ್ರದಿಂದ, ಅಪ್ಪ-ಮಕ್ಕಳ ಆಟದಿಂದ ತಾನು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡೆ. ಆದರೆ, ಈ ಬಾರಿ ಆ ರೀತಿ ಆಗುವುದಿಲ್ಲ.

ಬಿಜೆಪಿ ಮೂಲದ ಪ್ರಕಾರ ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಹುದ್ದೆ ಸಿಗುವ ಸಾಧ್ಯತೆಯೂ ಇಲ್ಲ.ಮುಖ್ಯಮಂತ್ರಿ ಹುದ್ದೆಯಂತೂ ದೂರ. ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಬಯಸಿತ್ತು. ಆದರೆ, ಸದಾನಂದ ಗೌಡರ ಹೇಳಿಕೆ ನಂತರ ಉಡುಪಿ ಚಿಕ್ಕಮಗಳೂರು ಚುನಾವಣೆಯಿಂದ ಯಡಿಯೂರಪ್ಪ ದೂರ ಉಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+