ಶೇ. 85ರಷ್ಟು ಶಕ್ತಿ ಉಳಿಸಿ LED ಬಳಸಿ: ವಿಪ್ರೋ

40 ವ್ಯಾಟ್ ಸಾಮರ್ಥ್ಯದ ಇನ್ ಕ್ಯಾಂಡಿಸೆಂಟ್ ಬಲ್ಬ್ ಬದಲಿಗೆ 5.5 ವ್ಯಾ ಸಾಮರ್ಥ್ಯದ LED ಬಲ್ಬ್ ಗಳನ್ನು ಬಳಸುವ ಮೂಲಕ ವಿದ್ಯುತ್ ಉಳಿತಾಯ ಮಾಡಬಹುದು ಎಂದು ವಿಪ್ರೋ ಸಂಸ್ಥೆ ಹೇಳಿದೆ.
ಭಾರತದ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಈ LED ಬಲ್ಬ್ ಗಳನ್ನು ವಿನ್ಯಾಸೊಳಿಸಲಾಗಿದೆ. ಈ ಬಲ್ಬ್ ಗಳ ಮೂಲಕ ಶೇ.85 ರಷ್ಟು ವಿದ್ಯುತ್ ಉಳಿಸಬಹುದು ಎಂದು ವಿಪ್ರೋ ಹೇಳಿದೆ.
ಸಾಮಾನ್ಯ ಬಲ್ಬ್ ಗಳು 1,000 ಗಂಟೆಗಳಷ್ಟು ಆಯುಷ್ಯ ಹೊಂದಿದ್ದರೆ, LED ಬಲ್ಬ್ ಗಳು 50,000 ಗಂಟೆಗಳ ಕಾಲ ಉರಿಯುತ್ತದೆ.
LED ಬಲ್ಬ್ ಗಳು ಪರಿಸರ ಸ್ನೇಹಿಯಾಗಿದ್ದು, ಪಾದರಸವನ್ನು ಹೊಂದಿಲ್ಲ. UV ವಿಕಿರಣದ ಭಯವೂ ಇಲ್ಲ. ಇನ್ ಕ್ಯಾಂಡಿಸೆಂಟ್ ಬಲ್ಬ್ ಹಾಗೂ ಸಿಎಫ್ ಎಲ್ ಬದಲು LED ಬಳಸುವುದು ಸೂಕ್ತ ಎಂದು ವಿಪ್ರೋ ಲೈಟಿಂಗ್ ಸಂಸ್ಥೆ ಸಲಹೆ ನೀಡಿದೆ.












Click it and Unblock the Notifications