ಮಂಗಳೂರಿನಲ್ಲಿ ಮಾ.11ರಂದು 'ಲಂಕೇಶ್ 77'
ಮಂಗಳೂರು,
ಮಾ. 10 : ಬರಹಗಾರ, ಸಿನೆಮಾ ನಿರ್ದೇಶಕ, ಲಂಕೇಶ್ ಪತ್ರಿಕೆ ಸಂಪಾದಕರಾಗಿದ್ದ ಪಿ ಲಂಕೇಶ್ ಅವರ ಹುಟ್ಟುಹಬ್ಬ ಮಾರ್ಚ್ 11ರಂದು. ಈ ಸಂದರ್ಭದಲ್ಲಿ ಅವರ ವ್ಯಕ್ತಿತ್ವ, ಬರಹಗಳನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ 'ಲಂಕೇಶ್ 77' ಎಂಬ ಕಾರ್ಯಕ್ರಮವನ್ನು ಮಂಗಳೂರಿನ ಸೇಂ. ಅಲೋಸಿಯಸ್ ಪಿಯು ಕಾಲೇಜಿನಲ್ಲಿ ಮಾ. 11ರಂದು ಹಮ್ಮಿಕೊಳ್ಳಲಾಗಿದೆ. id="toptextpromo">ಪ್ರತಿವರ್ಷ
ಬೆಂಗಳೂರಿನಲ್ಲಿ ನಡೆಸಲಾಗುತ್ತಿದ್ದ ಲಂಕೇಶ್ ಅವರು ಹುಟ್ಟುಹಬ್ಬದ ಆಚರಣೆಯನ್ನು ಮೊದಲ ಬಾರಿ ಆಯೋಜಿಸಲಾಗುತ್ತಿದ್ದು, ಪುಸ್ತಕ ಬಿಡುಗಡೆ, ಲಂಕೇಶ್ ಬರಹ ಕುರಿತ ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿದೆ ಎಂದು ಅವರ ಮಗಳು, ಗೌರಿ ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್ ಅವರು ಮಾಧ್ಯಮದವರಿಗೆ ಶನಿವಾರ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಖ್ಯಾತ
ಬರಹಗಾರ ದೇವನೂರು ಮಹಾದೇವ ಅವರು ಈ ಕಾರ್ಯಕ್ರಮವನ್ನು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ. ನಂತರ, 1974ರಲ್ಲಿ ಲಂಕೇಶ್ ಅವರು ಹೊರತಂದಿದ್ದ 'ಪಾಂಚಾಲಿ' ದೀಪಾವಳಿ ವಿಶೇಷಾಂಕವನ್ನು ಸುರೇಶ್ ಭಟ್ ಬಕ್ರಬೈಲ್ ಅವರು ಬಿಡುಗಡೆ ಮಾಡಲಿದ್ದಾರೆ. ಮೊದಲ ಸೆಷನ್‌ನಲ್ಲಿ ಕರಾವಳಿಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಇದರ ಅಧ್ಯಕ್ಷತೆ ಲೇಖಕಿ ಸಾರಾ ಅಬೂಬಕರ್ ಅವರು ವಹಿಸಲಿದ್ದಾರೆ.











Click it and Unblock the Notifications