ನ್ಯಾ ಸಂತೋಷ್ ಹೆಗ್ಡೆ ಬಂಧನಕ್ಕೆ ಆಗ್ರಹ

ಲೋಕಾಯುಕ್ತ ವರದಿಯನ್ನು ಆಧರಿಸಿ ಯಡಿಯೂರಪ್ಪ ಅವರ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ ರದ್ದುಪಡಿಸಿ, ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ. ಲೋಕಾಯಯುಕ್ತ ವರದಿ ಎಷ್ಟು ಸರಿಯಾಗಿದೆ ಎಂಬುದಕ್ಕೆ ಈ ತೀರ್ಪು ಸಾಕ್ಷಿಯಾಗಿದೆ. ಅಲ್ಲದೆ ಸಾಮಾನ್ಯ ಕೋರ್ಟ್ ಈ ತೀರ್ಪು ನೀಡಿಲ್ಲ. ಹೈಕೋರ್ಟಿನ ವಿಭಾಗೀಯ ಪೀಠವೇ ಈ ಮಹತ್ವದ ತೀರ್ಪು ನೀಡಿದೆ. ಸಹಜ ನ್ಯಾಯ ಪಾಲಿಸದೇ ವರದಿ ನೀಡಿದ್ದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ಇಂತಹ ದುರುದ್ದೇಶಪೂರಿತ ವರದಿಯಿಂದಲೇ ಯಡಿಯೂರಪ್ಪನವರು ರಾಜೀನಾಮೆ ನೀಡುವಂತಾಯಿತು. ಆದ್ದರಿಂದ ಆ 'ವರದಿಗಾರ' ನ್ಯಾ ಸಂತೋಷ್ ಹೆಗ್ಡೆ ಅವರನ್ನು ಬಂಧಿಸಬೇಕು ಎಂದು ಸುರೇಶ್ ಆಗ್ರಹಿಸಿದ್ದಾರೆ.
ಸಾರಿ ಕೇಳಿ: ಈ ಮಧ್ಯೆ, ದುರುದ್ದೇಶಪೂರಿತ ವರದಿಯನ್ನು ಮುಂದುಟ್ಟಿಕೊಂಡು 6 ತಿಂಗಳಿಂದ ಒಂದೇ ಸಮನೆ ಯಡಿಯೂರಪ್ಪನವರ ಮೇಲೆ ಮುರುಕೊಂಡು ಬಿದ್ದಿದ್ದ ವಿರೋಧ ಪಕ್ಷಗಳು ಈಗ ಸನ್ಮಾನ್ಯ ಯಡಿಯೂರಪ್ಪನವರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ವಕ್ತಾರ ಸಿಟಿ ರವಿ ಆಗ್ರಹಿಸಿದ್ದಾರೆ.
ಇದೇ ವೇಳೆ, ನ್ಯಾ. ಸಂತೋಷ್ ಹೆಗ್ಡೆ ಅವರು ನೀಡಿರುವ ವರದಿ ಸರಿಯೋ, ತಪ್ಪೋ ಅದು ಬೇರೆ ವಿಚಾರ. ಆದರೆ ವರದಿ ನೀಡಿದ ನ್ಯಾ. ಸಂತೋಷ್ ಹೆಗ್ಡೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಕಾಯಿದೆಯಲ್ಲಿ ಅವಕಾಶವಿಲ್ಲ ಎಂದು ಖ್ಯಾತ ವಕೀಲ ದಿವಾಕರ್ ಅಭಿಪ್ರಾಯಪಟ್ಟಿದ್ದಾರೆ.











Click it and Unblock the Notifications