ಯಡಿಯೂರಪ್ಪರಿಂದಲೇ ಬಜೆಟ್: ಸದಾನಂದಗೆ ಹಿನ್ನಡೆ
ಬೆಂಗಳೂರು,ಮಾ.7:
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವನ್ನುಂಟು ಮಾಡಿದ್ದಾರೆ ಎಂಬ ಆರೋಪದಿಂದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುಕ್ತರಾಗಿದ್ದು, ಅವರೇ ಈಗ ತಮ್ಮ ಮಹತ್ವಾಕಾಂಕ್ಷಿಯ ಲಕ್ಷ ಕೋಟಿ ರುಪಾಯಿಯ ಬಜೆಟ್ ಮಂಡನೆಗೆ ಹಾದಿ ಸುಗಮವಾಗಿದೆ. id="toptextpromo">ಇದೇ
ವೇಳೆ, ನಾನೇ ಬಜೆಟ್ ಮಂಡಿಸುತ್ತೇನೆ ಎಂದು ಫುಲ್ ಜೂಮ್ ನಲ್ಲಿ ಬೀಗುತ್ತಿದ್ದ ಹಾಲಿ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಸ್ವಲ್ಪ ಮಟ್ಟಿಗೆ ಸೆಟ್ ಬ್ಯಾಕ್ ಆಗಿದೆ. ತೀರಾ ಇತ್ತೀಚೆಗೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಬಿಜೆಪಿ ಪಕ್ಷದಲ್ಲಿ ನಡೆದಿದ್ದ ವಿದ್ಯಮಾನಗಳು ತೀರಾ ಅಸಹ್ಯಕರ ಹಂತ ತಲುಪಿತ್ತು. id='are-slot-1' class='oiad oi-axt oiadv'> id='top-searched-articles'>ಖುದ್ದು
ಅಡ್ವಾಣಿಯವರ ನಿರ್ದೇಶನದಂತೆ ನ್ಯಾ. ಸಂತೋಷ್ ಹೆಗ್ಡೆಯ ಅಕ್ರಮ ಗಣಿಗಾರಿಕೆ ವರದಿಯನ್ನು ನೆಪವಾಗಿಸಿಕೊಂಡು ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಲಾಗಿತ್ತು. ಈಗ ಯಡಿಯೂರಪ್ಪನವರು ಅದನ್ನೇ ದಾಳವಾಗಿ ಬಳಸಿಕೊಂಡು ಮುಖ್ಯಮಂತ್ರಿ ಹುದ್ದೆಯನ್ನು ಮತ್ತೆ ಅಲಂಕರಿಸಲು ಕೆಲವೇ ಹೆಜ್ಜೆಗಳ ದೂರದಲ್ಲಿದ್ದಾರೆ.











Click it and Unblock the Notifications