ಯಡಿಯೂರಪ್ಪ ಸಿಎಂ ಆಗ್ಬೇಕಾ, ಬೇಡ್ವಾ? ಚರ್ಚಿಸಿ
ಬೆಂಗಳೂರು,
ಮಾ.7: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ''ಶುದ್ಧಹಸ್ತ'' ಎಂದು ನ್ಯಾಯಮೂರ್ತಿಗಳಾದ ಕೆ ಭಕ್ತವತ್ಸಲ ಮತ್ತು ಗೋವಿಂದರಾಜು ಅವರ ಪೀಠ ಇಂದು ತೀರ್ಪು ನೀಡಿದೆ. ಇದು ರಾಜ್ಯ ರಾಜಕೀಯದ ಮೇಲೆ ಭಾರಿ ಪರಿಣಾಮ ಬೀರುವಂತಹ ಮಹತ್ವದ ತೀರ್ಪು. id="toptextpromo">ಇದು
ಯಡಿಯೂರಪ್ಪನವರನ್ನು ಕೋರ್ಟ್ ಕಟೆಕಟೆಯಿಂದ ನೇರವಾಗಿ ಮುಖ್ಯಮಂತ್ರಿ ಪೀಠಕ್ಕೆ ಕರೆದೊಯ್ಯಬಲ್ಲದಾ? ಬಿಜೆಪಿ ಹೈಕಮಾಂಡ್ ಇದಕ್ಕೆ ಒಪ್ಪುವುದಾ? ಎಂಬುದು ಬೇರೆ ವಿಚಾರ. ಆದರೆ ಹಾಲಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಸಿಎಂ ಪೀಠದಿಂದ ಕೆಳಗಿಳಿದು ಆ ಪಟ್ಟವನ್ನು ಯಡಿಯೂರಪ್ಪಗೆ ಒಪ್ಪಿಸಬೇಕಾ ಅಥವಾ ಬೇಡವಾ ಎಂಬುದು ಇಲ್ಲಿ ಚರ್ಚಾರ್ಹ. ಹಾಗಾಗಿ ಈ ಬಗ್ಗೆ ಚರ್ಚಿಸಲು 'ಒನ್ಇಂಡಿಯಾ ಕನ್ನಡ' ತನ್ನ ಓದುಗರಿಗೆ ವೇದಿಕೆ ಒದಗಿಸುತ್ತದೆ. id='are-slot-1' class='oiad oi-axt oiadv'> id='top-searched-articles'>ಸೋ,
ನಿಮ್ಮ ಚಿಕ್ಕ, ಚೊಕ್ಕ, ನಿಖರ ಅಭಿಪ್ರಾಯಕ್ಕಾಗಿ 'ಒನ್ಇಂಡಿಯಾ ಕನ್ನಡ'ದಲ್ಲಿ ಸದಾ ಮಣೆ, ಮನ್ನಣೆ ಇರುತ್ತದೆ. ತಡವೇಕೆ ಬರೆಯಿರಿ, ನಿಮಗೇನನ್ನಿಸುತ್ತದೆ ಯಡಿಯೂರಪ್ಪ ಮತ್ತೆ ಕರ್ನಾಟಕ ಮುಖ್ಯಮಂತ್ರಿ ಆಗಲಿ ಎಂಬುದರ ಬಗ್ಗೆ...











Click it and Unblock the Notifications