ಬಿಜೆಪಿ ಒಡೆದು ಮೂರು ಹೋಳು : ಕೋಡಿಮಠಶ್ರೀ ಭವಿಷ್ಯ

Kodimatha Swamiji predicts BJP will split into 3 parts
ಮಂಗಳೂರು, ಮಾ. 7 : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ರದ್ದಾಗಿ ಯಡಿಯೂರಪ್ಪ ಅವರು ಸಂತಸದ ಕಡಲಲ್ಲಿ ತೇಲಾಡುತ್ತಿರುವ ಮೊದಲೇ, ಬಿಜೆಪಿ ಸರಕಾರ ಐದು ವರ್ಷ ಪೂರ್ಣ ಮಾಡದು, ಅವಧಿಗೆ ಮೊದಲೇ ಮತ್ತೊಂದು ಚುನಾವಣೆ ಬರಲಿದೆ ಎಂದು ಕೋಡಿಮಠ ಶ್ರೀಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

ರಾಜಕೀಯದ ಆಗುಹೋಗುಗಳ ಬಗ್ಗೆ ತಾಳೆಗರಿಗಳ ಮುಖಾಂತರ ಭವಿಷ್ಯ ನುಡಿಯುವಲ್ಲಿ ಸಿದ್ಧಹಸ್ತರಾಗಿರುವ ಶ್ರೀಗಳ ಭವಿಷ್ಯವಾಣಿಯ ಪ್ರಕಾರ, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅತಂತ್ರತೆ ಮುಂದುವರಿಯಲಿದೆ. ಅವಧಿಗೆ ಮುನ್ನವೇ ಚುನಾವಣೆ ಬರಲಿದೆ ಮತ್ತು ನಂತರವೂ ಮೈತ್ರಿಕೂಟಗಳ ಸರಕಾರವೇ ಮುಂದುವರಿಯಲಿದೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಲ್ಲಿಗೆ ಮಂಗಳವಾರ ಅವರು ಬಂದಿದ್ದರು. ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ 2010ರವರೆಗೆ ಮುಂದುವರಿಯಲಿದೆ. ಮುಂದಿನ ಚುನಾವಣೆ ಬರುವುದರೊಳಗೆ ಬಿಜೆಪಿ ಮೂರು ಭಾಗ ಆಗುತ್ತದೆ ಎಂದು ರಾಜ್ಯ ರಾಜಕೀಯದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

ಶ್ರೀಗಳ ಭವಿಷ್ಯ ಏನನ್ನು ಅರ್ಥೈಸುತ್ತದೆ? : ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಡಿವಿ ಸದಾನಂದ ಗೌಡ ಮುಂದುವರಿಯುವುದು ಅನಿಶ್ಚಿತವೆ? ಕೋರ್ಟ್ ಕಿಟಿಕಿಟಿಯಿಂದ ಭಾಗಶಃ ರಿಲೀಫ್ ಪಡೆದಿರುವ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆಯೆ? ಸದ್ಯಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಚಾನ್ಸ್ ಇಲ್ಲವೇ ಇಲ್ಲ ಎಂದು ಕೋಡಿಮಠ ಶ್ರೀಗಳೇ ಹೇಳಿದ್ದರು. ಅವರು ಮುಖ್ಯಮಂತ್ರಿ ಆದರೂ ಬೇರೆ ಆಕಾಂಕ್ಷಿಗಳು ಬಿಡುತ್ತಾರೆಯೆ? ರಾಜ್ಯ ರಾಜಕಾರಣದ ಬಗ್ಗೆ ಶಕುನ ನುಡಿದಿರುವ ಕೋಡಿಮಠ ಶ್ರೀಗಳು ಸ್ಪಷ್ಟನೆ ನೀಡಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+