ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಿ

2012-13ರ ಅವಧಿಯಲ್ಲಿ ನಾಗರೀಕರು ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಬಿಬಿಎಂಪಿ ತಾಣಕ್ಕೆ ಭೇಟಿ ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸಿ ಸುಲಭವಾಗಿ ತೆರಿಗೆ ಪಾವತಿಸಬಹುದು ಎಂದು ಆಯುಕ್ತ ಎಂಕೆ ಶಂಕರಲಿಂಗೇಗೌಡ ಹೇಳಿದ್ದಾರೆ.
ಏ.1ರಿಂದ ಈ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಿರುತ್ತದೆ. ಈ ಸೇವೆ ಉಚಿತವಾಗಿದ್ದು, ತೆರಿಗೆ ಪಾವತಿಸಲು ಯಾವುದೇ ಮೊತ್ತ ಪಾವತಿಸಬೇಕಿಲ್ಲ. ಐಡಿಬಿಐ ಬ್ಯಾಂಕ್ ನ ಹಣಪಾವತಿ ಗೇಟ್ ವೇ ಮೂಲಕ ಸುರಕ್ಷಿತವಾಗಿ ಹಣ ಸಂದಾಯ ಮಾಡಬಹುದು.
ಮಾರ್ಚ್ 31 ರೊಳಗೆ ಪ್ರಸಕ್ತ ವರ್ಷದ ಪಾವತಿ ಮೊತ್ತ ಸುಮಾರು 1,500 ಕೋಟಿ ರು ಸಂಗ್ರಹಿಸುವ ಗುರಿ ಹೊಂದಿದ್ದ ಬಿಬಿಎಂಪಿ 1,250 ಕೋಟಿ ರು ಸಂಗ್ರಹಿಸಿದೆ ಎಂದು ಆಯುಕ್ತ ಶಂಕರಲಿಂಗೇಗೌಡ ಮಾಹಿತಿ ನೀಡಿದರು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: http://bbmp.gov.in/












Click it and Unblock the Notifications