ಯುಪಿ: ಬಿಜೆಪಿಗೆ ವರವಾದ ಮೋದಿ ಅನುಪಸ್ಥಿತಿ

ಆರಂಭಿಕ ಮತ ಎಣಿಕೆಯನ್ನು ನೋಡಿದರೆ ಉತ್ತರಪ್ರದೇಶದಲ್ಲಿ ಬಿಜೆಪಿ ಅಚ್ಚರಿಯ ಪ್ರದರ್ಶನ ನೀಡುತ್ತಿದೆ. ಪಕ್ಷ ಎರಡನೇ ಸ್ಥಾನದಲ್ಲಿ ವಿಜೃಂಭಿಸುತ್ತಿದೆ. ಫೈರ್ ಬ್ರ್ಯಾಂಡ್ ಉಮಾಭಾರತಿ ಹವಾ ಒಂದಷ್ಟು ಕೆಲಸ ಮಾಡಿದಂತಿದೆ. ಇದೇ ವೇಳೆ ಸಮಾಜವಾದಿ ಪಕ್ಷದ ಸೈಕಲ್ ನಾಗಾಲೋಟದಲ್ಲಿದೆ. ಕಳೆದ ಬಾರಿ ಬಿಎಸ್ಪಿ ಮಾಯದಂತೆ 206 ಸ್ಥಾನ ಗಳಿಸಿದ್ದರೆ ಈ ಬಾರಿ ಎಸ್ಪಿ ನಿರ್ಣಾಯಕ ಡಬಲ್ ಸೆಂಚುರಿ ಬಾರಿಸಲು ಸನ್ನದ್ಧವಾಗಿದೆ.
ಮಾಯಾವತಿಯ ಆನೆ ಮಾಯವಾಗಿದೆ. ಇನ್ನು ಯುವರಾಜ ರಾಹುಲ್ ಗಾಂಧಿಯ ಕಾಂಗ್ರೆಸ್ ನಾನೂ ಇದ್ದೇನೆ ಎಂದು ಮುಲಾಯಂರತ್ತ ಕೂಗಿ ಹೇಳುತ್ತಿದೆಯಾದರೂ ಎಸ್ ಪಿಯ ಯುವರಾಜ ಅಖಿಲೇಶ್ ಅದಾಗಲೇ ಅಪ್ಪನನ್ನು ಹೈಜಾಕ್ ಮಾಡಿದ್ದು, ಕಾಂಗ್ರೆಸ್ ಸಹವಾಸವೇ ಬೇಡ. ಸ್ವತಂತ್ರವಾಗಿ ಸರಕಾರ ರಚಿಸೋಣ ಎನ್ನುತ್ತಿದ್ದಾರೆ.
ಈ ಮಧ್ಯೆ, ಯುಪಿಯಲ್ಲಿ ತ್ರಿಶಂಕು ಸ್ಥಿತಿ ಏರ್ಪಡುತ್ತದೆ ಎಂಬ exit poll ಸುಳ್ಳಾಗಿದೆ. ಆದರೆ, ಸಿಎನ್ಎನ್-ಐಬಿಎನ್-ದಿ ವೀಕ್-ಸಿಎಸ್ ಡಿಎಸ್ ಭವಿಷ್ಯ ನಿವಾಗುತ್ತಿದೆ. ಸಮಾಜವಾದಿ ಪಕ್ಷ 232 ರಿಂದ 250 ಸೀಟುಗಳನ್ನು ಗೆಲ್ಲಲಿದೆ. ಬಿಎಸ್ ಪಿಗೆ 65 ರಿಂದ 70 ಸಿಗುವ ನಿರೀಕ್ಷೆಯಿದೆ ಎಂದು ಸಿಎನ್ಎನ್-ಐಬಿಎನ್ ಹೇಳಿತ್ತು.












Click it and Unblock the Notifications