ಉತ್ತರಾಖಂಡದಲ್ಲಿ ಯಾರು ಸರಕಾರ ರಚಿಸುತ್ತಾರೆ?
ಡೆಹ್ರಾಡೂನ್,
ಮಾ. 6 : ತಕ್ಕಡಿಯಲ್ಲಿ ಸರಿಸಮನಾಗಿ ತೂಗಿದಂತೆ ಉತ್ತರಾಖಂಡದ ಮತದಾರರು ಕ್ಷೇತ್ರಗಳನ್ನು ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ಸಿಗೆ ಹಂಚಿಬಿಟ್ಟಿದ್ದಾರೆ. 70 ವಿಧಾನಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 31 ಸ್ಥಾನಗಳನ್ನು ಗೆದ್ದಿದ್ದರೆ ಮತ್ತು ಕಾಂಗ್ರೆಸ್ 32 ಸ್ಥಾನಗಳನ್ನು ಗೆದ್ದು ಒಂದು ಹೆಜ್ಜೆ ಮುಂದಿಟ್ಟಿದೆ. id="toptextpromo">ಹೀಗಾಗಿ
ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದ್ದ ರಾಜ್ಯದಲ್ಲಿ ಈಗ ಅತಂತ್ರ ವಿಧಾನಸಭೆ. ಕಾಂಗ್ರೆಸ್ 32 ಸ್ಥಾನಗಳನ್ನು ಗೆದ್ದಿದ್ದರೂ ಸ್ಪಷ್ಟ ಬಹುಮತ ಪಡೆಯಲು ಬೇಕಾಗಿದ್ದುದು 36 ಸ್ಥಾನಗಳು. ಈಗ 3 ಸ್ಥಾನ ಗಳಿಸಿರುವ ಬಿಎಸ್‌ಪಿ ಮತ್ತು 4 ಸ್ಥಾನ ಗೆದ್ದಿರುವ ಪಕ್ಷೇತರರು ನಿರ್ಣಾಯಕವಾಗಬಲ್ಲರು. id='are-slot-1' class='oiad oi-axt oiadv'> id='top-searched-articles'>ತಾನೇ
ಸರಕಾರ ರಚಿಸುವುದು ಖಂಡಿತ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ. ಒಂದು ಸ್ಥಾನದಿಂದ ಹಿಂದಿರುವ ಬಿಜೆಪಿಯ ಗಾಯದ ಮೇಲೆ ಉಪ್ಪು ಸುರಿದಂತೆ ಮುಖ್ಯಮಂತ್ರಿ ಬಿಸಿ ಖಂಡೂರಿ ಅವರು ಕಾಂಗ್ರೆಸ್ಸಿನ ಎಸ್ಎಸ್ ನೇಗಿ ಅವರಿಗೆ ಸೋತಿದ್ದಾರೆ.











Click it and Unblock the Notifications