ಆಟೋ ದರ ಏರಿಸಬೇಕಾ? ಬೇಡವಾ? ನೀವೇ ಹೇಳಿ

ಈ ನಿಟ್ಟಿನಲ್ಲಿ, ವಿವಿಧ ಆಟೋರಿಕ್ಷಾ ಸಂಘಟನೆಗಳು ದರ ಪರಿಷ್ಕರಣೆ ಕುರಿತು ಸಲ್ಲಿಸಲಾಗಿರುವ ಮನವಿಯ ಮೇರಿಗೆ ಪ್ರಾದೇಶಿಕ ಸಾರಿಗೆ ಕಚೇರಿ, ಬೆಂಗಳೂರು (ಪೂರ್ವ) ಸಂಚಾರಿ ವಿಭಾಗದ ಉಪ ಪೊಲೀಸ್ ಆಯುಕ್ತರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ. ಈಗಿರುವ ಕನಿಷ್ಠ ದರ 17 ರು.ಯನ್ನು ಪರಿಷ್ಕರಿಸಿ 24 ರು. ಮಾಡಬೇಕೆಂದು ಬೇಡಿಕೆ ಇಡಲಾಗಿದೆ.
ಆಟೋ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. ಪತ್ರ ಅಥವಾ ಈಮೇಲ್ ಮುಖಾಂತರ ಆಟೋ ಬಳಸುವ ಸಾರ್ವಜನಿಕರು ಅಭಿಪ್ರಾಯ, ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ. ಈ ಮೇಲ್ ವಿಳಾಸ ಇಂತಿದೆ : [email protected]
ಪತ್ರ ಕಳಿಸಲು ವಿಳಾಸ : ಕಾರ್ಯದರ್ಶಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಬೆಂಗಳೂರು (ನಗರ) ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೆಂಗಳೂರು (ದಕ್ಷಿಣ), ಜಯನಗರ, ೨ನೇ ಮಹಡಿ, ಟಿ.ಟಿ.ಎಂ.ಸಿ. ಕಟ್ಟಡ, ಬಿ.ಎಂ.ಟಿ.ಸಿ ಬಸ್ ಸ್ಟ್ಯಾಂಡ್, ಜಯನಗರ ೪ನೇ ಬ್ಲಾಕ್, ಬೆಂಗಳೂರು - 560011. ಅಭಿಪ್ರಾಯ ತಿಳಿಸಲು ಕಡೆಯ ದಿನಾಂಕ : ಮಾರ್ಚ್ 7, 2012, ಬುಧವಾರ.












Click it and Unblock the Notifications