ಬಾರ್ ಕೌನ್ಸಿಲ್ ನಿಂದ ಸಂಸದ ವಿಶ್ವನಾಥ್ ಉಚ್ಚಾಟನೆ

ಸಂಘದ ಉಪಾಧ್ಯಕ್ಷ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. ಮೈಸೂರು ಬಾರ್ ಕೌನ್ಸಿಲ್ ಸಭೆ ಈ ತೀರ್ಮಾನಕ್ಕೆ ಬಂದಿದ್ದು ವಿಶ್ವನಾಥ್ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವ ತೀರ್ಮಾನಕ್ಕೆ ಸಂಘ ಬಂದಿದೆ.
ಅಲ್ಲದೆ ವಿಶ್ವನಾಥ್ ಜೊತೆ ಇದ್ದ ಇಬ್ಬರು ವಕೀಲರನ್ನು ಕೂಡ ಉಚ್ಚಾಟನೆ ಮಾಡುವ ತೀರ್ಮಾನಕ್ಕೆ ಮತ್ತು ಮಾಧ್ಯಮ ಪ್ರತಿನಿಧಿಗಳ ವಿರುದ್ದ ನ್ಯಾಯ ಸಿಗುವವರೆಗೆ ಹೋರಾಟ ಮಾಡುವ ತೀರ್ಮಾನಕ್ಕೆ ಬಾರ್ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿಶ್ವನಾಥ್ ಪ್ರತಿಕ್ರಿಯೆ: ಬಾರ್ ಕೌನ್ಸಿಲ್ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ವಿಶ್ವನಾಥ್, ನಾನು ಬಾರ್ ಕೌನ್ಸಿಲ್ ಸದಸ್ಯನೇ ಅಲ್ಲ. ಹಾಗಿರುವಾಗ ಉಚ್ಚಾಟನೆ ಎಲ್ಲಿಂದ ಬಂತು ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications